▪ 'ಪ್ರಧಾನಮಂತ್ರಿ ಮುದ್ರಾ ಯೋಜನೆ' ಎನ್ನುವುದು ಕಾರ್ಪೊರೇತರ್ , ಕೃಷಿಯೇತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ರೂಪಾಯಿ 10 ಲಕ್ಷದ ವರೆಗೂ ಮುದ್ರಾ ಸಾಲವನ್ನು ಒದಗಿಸುವುದಕ್ಕಾಗಿ ಭಾರತ ಸರ್ಕಾರವು ಸ್ಥಾಪಿಸಿದ ಯೋಜನೆಯಾಗಿದೆ.
▪ ಭಾರತದಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲಗಳ ವಿತರಣೆಯು ಗಮನಾರ್ಹ ಹೆಚ್ಚಳವನ್ನು ಕಂಡಿದೆ, FY24 ರ ಮೊದಲ ತ್ರೈಮಾಸಿಕದಲ್ಲಿ ₹81,597 ಕೋಟಿ ತಲುಪಿದೆ.
▪ 2022 ರಲ್ಲಿ ವಿತರಿಸಲಾದ ₹62,650 ಕೋಟಿಗೆ ಹೋಲಿಸಿದರೆ ಇದು ಗಮನಾರ್ಹ 23% ಬೆಳವಣಿಗೆಯನ್ನು ಸೂಚಿಸಲಾಗಿದ್ದು, ಇದು ಯೋಜನೆಯ ಪ್ರಾರಂಭದ ನಂತರದ ಮೊದಲ ತ್ರೈಮಾಸಿಕದಲ್ಲಿ ವಿತರಣೆಯಲ್ಲಿನ ಅತ್ಯಧಿಕ ಹೆಚ್ಚಳವಾಗಿದೆ.
▪ ಪ್ರಧಾನಮಂತ್ರಿ ಮುದ್ರಾ ಸಾಲವನ್ನು ಶಿಶು, ಕಿಶೋರ್ ,ತರುಣ್ ಎಂಬ ಮೂರು ವರ್ಗಗಳ ಅಡಿಯಲ್ಲಿ ಒದಗಿಸಲಾಗುತ್ತದೆ.
▪ ಅರ್ಹ ಸಾಲಗಾರರ ಪ್ರಕಾರಗಳು : ವ್ಯಕ್ತಿಗಳು ,ಮಾಲಿಕತ್ವ ಸಂಸ್ಥೆ, ಖಾಸಗಿ ನಿಯಮಿತ ಕಂಪನಿ, ಪಾಲುದಾರಿಕೆ ಸಂಸ್ಥೆ, ಸಾರ್ವಜನಿಕ ಕಂಪನಿ, ಹಾಗೂ ಯಾವುದೇ ಇತರ ಕಾನೂನು ರೂಪಗಳ ಸಂಸ್ಥೆಗಳು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.