➤ 'ಮನೆಯಂಗಳದಲ್ಲೇ ಅಂತಾರಾಷ್ಟ್ರೀಕರಣ' (Internationalisation at Home): ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ನಿಯಮಾವಳಿಗಳ ಅಡಿಯಲ್ಲಿ ಈ ಅನುಮತಿ ನೀಡಲಾಗಿದೆ. ಭಾರತವನ್ನು ಜಾಗತಿಕ ಜ್ಞಾನದ ಕೇಂದ್ರವನ್ನಾಗಿ (Global Knowledge Hub) ಮಾಡುವ ಮತ್ತು ಭಾರತೀಯ ಯುವಕರಿಗೆ ದೇಶದಲ್ಲೇ ಜಾಗತಿಕ ಮಟ್ಟದ ಶಿಕ್ಷಣ ನೀಡುವ ಉದ್ದೇಶವನ್ನು ಇದು ಹೊಂದಿದೆ.
➤ ಭಾರತದಲ್ಲಿ ಆರಂಭವಾಗಲಿರುವ 3 ವಿದೇಶಿ ವಿವಿಗಳು: ಕೇಂದ್ರ ಸರ್ಕಾರವು ಮುಂಬೈ ಮತ್ತು ಬೆಂಗಳೂರಿನಲ್ಲಿ ಒಟ್ಟು ಮೂರು ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಆರಂಭಕ್ಕೆ ಹಸಿರು ನಿಶಾನೆ ತೋರಿದೆ:
- ಬ್ರಿಸ್ಟಲ್ ವಿಶ್ವವಿದ್ಯಾಲಯ (University of Bristol), ಯುಕೆ – ಮುಂಬೈ ಕ್ಯಾಂಪಸ್
- ಯಾರ್ಕ್ ವಿಶ್ವವಿದ್ಯಾಲಯ (University of York), ಯುಕೆ – ಮುಂಬೈ ಕ್ಯಾಂಪಸ್
- ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ (UNSW), ಆಸ್ಟ್ರೇಲಿಯಾ – ಬೆಂಗಳೂರು ಕ್ಯಾಂಪಸ್
- ಆರಂಭಿಕ ಹಂತದಲ್ಲಿ ನೀಡಲಾಗುವ ಪ್ರಮುಖ ಕೋರ್ಸ್‌ಗಳು:
- ಅಂಡರ್ ಗ್ರಾಜುಯೇಟ್ (Undergraduate): ಬಿಸಿನೆಸ್ (Business), ಕಂಪ್ಯೂಟರ್ ಸೈನ್ಸ್ (Computer Science) ಮತ್ತು ಡೇಟಾ ಸೈನ್ಸ್ (Data Science).
- ಪೋಸ್ಟ್ ಗ್ರಾಜುಯೇಟ್ (Postgraduate): ಸೈಬರ್ ಸೆಕ್ಯೂರಿಟಿ (Cyber Security).
- ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI), ಹಣಕಾಸು (Finance), ಉದ್ಯಮಶೀಲತೆ (Entrepreneurship), ನವೀಕರಿಸಬಹುದಾದ ಇಂಧನ (Renewable Energy), ಆರೋಗ್ಯ ಮತ್ತು ಸಾರಿಗೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ವಿಸ್ತರಿಸಲಾಗುವುದು ಎಂದು ವಿವಿ ತಿಳಿಸಿದೆ.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ