➤ ನಾಗರಾಜು ಮದ್ದಿರಾಲ ಅವರ ಉತ್ತರಾಧಿಕಾರಿ: ಕಳೆದ ಮೇ ತಿಂಗಳಲ್ಲಿ ನಿವೃತ್ತರಾದ ಹಣಕಾಸು ಸೇವೆಗಳ ಇಲಾಖೆಯ (DFS) ಮಾಜಿ ಕಾರ್ಯದರ್ಶಿ ನಾಗರಾಜು ಮದ್ದಿರಾಲ (Nagaraju Maddirala) ಅವರ ಸ್ಥಾನಕ್ಕೆ ಸಂಜಯ್ ಲೋಹಿಯಾ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗಷ್ಟೇ (ಜೂನ್ 1, 2026) ಲೋಹಿಯಾ ಅವರು ಡಿಎಫ್‌ಎಸ್ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ ಅವರ ಹೆಗಲಿಗೆ ಆರ್‌ಬಿಐ ಮತ್ತು ಎಸ್‌ಬಿಐ ಮಂಡಳಿಗಳ ಜವಾಬ್ದಾರಿಯನ್ನೂ ನೀಡಲಾಗಿದೆ.
➤ ಸಂಜಯ್ ಲೋಹಿಯಾ:
- ಐಎಎಸ್ ಬ್ಯಾಚ್: ಇವರು 1994ರ ಬ್ಯಾಚ್‌ನ ಅಸ್ಸಾಂ-ಮೇಘಾಲಯ ಕೆಡರ್‌ನ (Assam-Meghalaya Cadre) ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ.
- ಹಿಂದಿನ ಹುದ್ದೆಗಳು: ಡಿಎಫ್‌ಎಸ್ ಕಾರ್ಯದರ್ಶಿಯಾಗುವ ಮುನ್ನ ಅವರು ಇದೇ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮುನ್ನ ಕೇಂದ್ರ ಗಣಿ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ, ಗಣಿಗಾರಿಕೆ ವಲಯದಲ್ಲಿ ಹಲವು ಪ್ರಮುಖ ಸುಧಾರಣೆಗಳನ್ನು ತಂದಿದ್ದರು.
- ಇತರ ಜವಾಬ್ದಾರಿಗಳು: ಅಸ್ಸಾಂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ, ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಹಾಗೂ ಪ್ರಧಾನಮಂತ್ರಿ ಕಚೇರಿಯಲ್ಲಿ (PMO) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ವ್ಯಾಪಕ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಅಲ್ಲದೆ ಎಲ್‌ಐಸಿ (LIC) ಮಂಡಳಿಯಲ್ಲೂ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ