* ಕ್ರೀಡಾಕೂಟದ ಒಂಬತ್ತನೇ ದಿನ ಪುರುಷರ ಹೈಜಂಪ್-ಟಿ64 ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ 26 ನೇ ಪದಕ ಮತ್ತು ಆರನೇ ಚಿನ್ನದ ಪದಕವಾಗಿದೆ.
* ಪ್ರವೀಣ್ ಕುಮಾರ್ ಅವರು 2.08 ಮೀಟರ್ ಎತ್ತರ ಜಿಗಿಯುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಈ ಸ್ಪರ್ಧೆಯಲ್ಲಿ ಅಮೆರಿಕದ ಡೆರೆಕ್ ಲೊಸಿಡೆಂಟ್ ಬೆಳ್ಳಿ (2.06 ಮೀ.) ಮತ್ತು ಉಜ್ಬೇಕಿಸ್ತಾನದ ಟೆಮುರ್ಬೆಕ್ ಗಿಯಾಜೊವ್ (2.03 ಮೀ.) ಕಂಚಿನ ಪದಕ ಗೆದ್ದರು.
* ಇದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತಕ್ಕೆ ಇದುವರೆಗೆ ಸಿಕ್ಕಿರುವ 11ನೇ ಪದಕವಾಗಿದೆ.
* ಈ ಚಿನ್ನದ ಸಾಧನೆಯೊಂದಿಗೆ ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್, ಪ್ಯಾರಾಲಿಂಪಿಕ್ಸ್‌ನ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ನಂತರ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ಭಾರತ ಇವರೆಗೆ 06 ಚಿನ್ನ, 09 ಬೆಳ್ಳಿ ಮತ್ತು 11 ಕಂಚಿನ ಪದಕಗಳನ್ನು ಒಳಗೊಂಡಿದ್ದು, 14ನೇ ಸ್ಥಾನ ಕಾಯ್ದುಕೊಂಡಿದೆ.
ಶನಿವಾರ, 07 ಸೆಪ್ಟೆಂಬರ್ 2024
11:40 ಪೂರ್ವಾಹ್ನ
Daily PDF
Paralympics 2024: ಭಾರತಕ್ಕೆ 6ನೇ ಚಿನ್ನದ ಪದಕ; ಹೈಜಂಪ್ನಲ್ಲಿ ಬಂಗಾರ ಗೆದ್ದ ಪ್ರವೀಣ್ ಕುಮಾರ್
Authored by:
Yallamma G