* ಕೇಂದ್ರ ಸರ್ಕಾರವು ಪ್ಯಾರಸಿಟಮಾಲ್, ಸಿಟ್ರಿಜಾನ್ ಮತ್ತು ಇತರ 156 ಸಂಯೋಜನೆಯ ಔಷಧಿಗಳನ್ನು ಆರೋಗ್ಯದ ದೃಷ್ಟಿಯಿಂದ ನಿಷೇಧಿಸಿದೆ.
* ಪ್ಯಾರಸಿಟಮಾಲ್ ಮತ್ತು ಸಿಟ್ರಿಜಾನ್ ಸೇರಿದಂತೆ 156 ಸಂಯೋಜನೆಯ ಔಷಧಿಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ಪರಿಶೀಲನೆಯಲ್ಲಿ ಕಂಡುಬಂದ ನಂತರ ಭಾರತ ಸರ್ಕಾರ ಅವುಗಳನ್ನು ನಿಷೇಧಿಸಿದೆ.
* ಆಗಸ್ಟ್ 24ರಂದು ಆರೋಗ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ 156 ಡ್ರಗ್ ಕಾಂಬಿನೇಶನ್ ನಿಷೇಧಿಸಲಾಗಿರುವುದನ್ನು ತಿಳಿಸಿತ್ತು.
* ಇತ್ತೀಚಿನ ಪಟ್ಟಿಯಲ್ಲಿನ ಪ್ರಮುಖ ಸ್ಥಿರ-ಡೋಸ್ ಸಂಯೋಜನೆಯ ಔಷಧಿಗಳು (ಎಪಿಸಿ) ಮೆಫೆನಾಮಿಕ್ ಆಮ್ಲ ಮತ್ತು ನ್ಯಾರಸಿಟಮಾಲ್ ಚುಚ್ಚುಮದ್ದಿನ ಸಂಯೋಜನೆಯನ್ನು ಒಳಗೊಂಡಿವೆ, ಇದನ್ನು ವಿವಿಧ ಪರಿಸ್ಥಿತಿಗಳಲ್ಲಿ ನೋವು ಮತ್ತು ಊತವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ, ಮತ್ತು ಹೊಟ್ಟೆ ನೋವಿಗೆ ಚಿಕಿತ್ಸೆ ನೀಡಲು ಬಳಸುವ ಒಮೆಪ್ರಜೋಲ್ ಮೆಗ್ನಿಸಿಯಮ್ ಮತ್ತು ಡೈಸೈಕ್ಲೋಮೈನ್ ಎಕ್ಸಿಎಲ್ ಸಂಯೋಜನೆಯ ಡೋಸ್ ಸೇರಿವೆ.
* ಪ್ಯಾರಸಿಟಮಾಲ್, ರಾಬೆಪ್ರಜೋಲ್, ಅಸಿಕ್ಲೋಫಿನಾಕ್ ಸಂಯೋಜನೆಯ ಔಷಧ ನಿಷೇಧಿತವಾಗಿದೆ. ಹಾಗೆಯೇ, ಪ್ಯಾರಸಿಟಮಾಲ್, ಸಿಟ್ರಿಜಾನ್ ಮತ್ತು ಕೆಫೀನ್ ಸಂಯೋಜನೆಯ ಔಷಧವೂ ನಿಷೇಧಿತವಾಗಿದೆ. ಈ ರೀತಿ 80ಕ್ಕೂ ಹೆಚ್ಚು ನಿಷೇಧಿತ ಸಂಯೋಜನೆಗಳಲ್ಲಿ ಪ್ಯಾರಸಿಟಮಾಲ್ ಇದೆ ಅಷ್ಟೇ.
ಶನಿವಾರ, 07 ಸೆಪ್ಟೆಂಬರ್ 2024
11:30 ಪೂರ್ವಾಹ್ನ
Daily PDF
'ಪ್ಯಾರಸಿಟಮಾಲ್', 'ಸಿಟ್ರಿಜಾನ್ ' ಸೇರಿದಂತೆ 156 ಮಾತ್ರೆಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ
Authored by:
Bhagya R K