* ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನೇತೃತ್ವದ ಮೈತ್ರಿಕೂಟವು ಸರಳ ಬಹುಮತ ಸಾಬೀತುಪಡಿಸಲು ಸಜ್ಜಾಗಿದ್ದು, ಅವರ ತಮ್ಮ ಶೆಹಬಾಜ್ ಷರೀಫ್ ಅವರು ನೂತನ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಫೆ.14 (ಬುಧವಾರ) ತಿಳಿಸಿವೆ.
* ಪಾಕಿಸ್ತಾನದಲ್ಲಿ ಸರಕಾರ ರಚನೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಫೆ.13 ರಂದು (ಮಂಗಳವಾರ) ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಪಿಎಂಎಲ್- ಎನ್ (ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಸ್ಥಾನಕ್ಕೆ ಪಕ್ಷವು ನಾಮ ನಿರ್ದೇಶನ ಮಾಡಿದೆ.
* ಪಾಕಿಸ್ತಾನದ ಮುಸ್ಲಿಂ ಲೀಗ್-ಕ್ವೆಡ್(ಪಿಎಂಎಲ್-ಕ್ಯೂ) ಪಕ್ಷದ ಶುಜಾತ್ ಹುಸೇನ್ ನಿವಾಸದಲ್ಲಿ ಶೆಹಬಾಜ್ ಮತ್ತು ಪಾಕಿಸ್ತಾನ ಪೀಪಲ್ಸ್ ಪಕ್ಷದ ಆಸಿಫ್ ಅಲಿ ಜರ್ದಾರಿ ಹಾಗೂ ಎಂಕ್ಯೂಎಂ ಪಕ್ಷದ ಖಾಲಿದ್ ಮಕ್ಯೂಲ್ ಸಿದ್ದಿಕಿ ಸಭೆ ಸೇರಿ ಮೈತ್ರಿ ಸರ್ಕಾರ ರಚನೆಯ ತೀರ್ಮಾನಕ್ಕೆ ಬಂದಿದ್ದಾರೆ.
* ಪಕ್ಷದ ಅಧ್ಯಕ್ಷ ಮತ್ತು ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರ ಹೆಸರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ನವಾಜ್ ಷರೀಫ್ ಅವರೇ ಸೂಚಿಸಿದರು ಎಂದು ಪಕ್ಷದ ಮಾಹಿತಿ ಕಾರ್ಯದರ್ಶಿ ಮರಿಯುಂ ಔರಂಗಜೇಬ್ ಅವರು ತಿಳಿಸಿದ್ದಾರೆ.
* ಇದೇವೇಳೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಉಪಾಧ್ಯಕ್ಷರಾದ ಮಾರ್ಯಮ್ ನವಾಜ್ ಅವರನ್ನು ಅಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಗುರುವಾರ, 15 ಫೆಬ್ರುವರಿ 2024
5:28 ಅಪರಾಹ್ನ
Daily PDF
ಪಾಕಿಸ್ತಾನದ ನೂತನ ಪ್ರಧಾನಿಯಾಗಿ 'ಶೆಹಬಾಜ್ ಷರೀಫ್' ಆಯ್ಕೆ
Authored by:
Yallamma G