* ಭಾರತ ಮತ್ತು ಯುಎಇ ದ್ವಿಪಕ್ಷೀಯ ಹೂಡಿಕೆ ಉತ್ತೇಜನ, ಬಂದರು ಮೂಲಸೌಕರ್ಯ ಅಭಿವೃದ್ಧಿ, ವಿದ್ಯುತ್ ವ್ಯಾಪಾರ, ಯುಪಿಐ, ಕ್ರೆಡೀಟ್ ಮತ್ತು ಡೆಬಿಟ್ ಕಾರ್ಡ್ಗಳಂತಹ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ಗಳ ಪರಸ್ಪರ ಸಂಪರ್ಕ ಮತ್ತು ಭಾರತ-ಮದ್ಯಪ್ರಾಚ್ಯ ಆರ್ಥಿಕ ಕಾರಿಡಾರ್ನ ಅಂತರ್ ಸರ್ಕಾರಿ ಚೌಕಟ್ಟು ಒಪ್ಪಂದದ ಹಲವು ಒಪ್ಪಂದಗಳಿಗೆ ಫೆಬ್ರುವರಿ 13 ರಂದು ಸಹಿ ಹಾಕಿದ್ದಾರೆ.
* ಫೆಬ್ರುವರಿ 13 ರಂದು (ಮಂಗಳವಾರ) ಅಬುಧಾಬಿಯಲ್ಲಿ ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
* ಮುಖಾಮುಖಿ ಮತ್ತು ನಿಯೋಗ ಮಟ್ಟದ ಮಾತುಕತೆ ನಡೆಸಿದ ನಂತರ ಉಭಯ ನಾಯಕರು ದ್ವಿಪಕ್ಷೀಯ ಪಾಲುದಾರಿಕೆಯನ್ನು ಪರಿಶೀಲಿಸಿದರು ಮತ್ತು ಸಹಕಾರದ ಹೊಸ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
* ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಮೂಲಸೌಕರ್ಯ, ಫಿನ್ಸೆಕ್, ಇಂಧನ, ಮೂಲಸೌಕರ್ಯ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಕ್ಷೇತ್ರಗಳಲ್ಲಿ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಅವರು ಸ್ವಾಗತಿಸಿದರು ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.
ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್, ವ್ಯಾಪಾರ, ಇಂಧನ ಒಪ್ಪಂದಗಳಿಗೆ ಭಾರತ-ಯುಎಇ ಒಪ್ಪಂದ
Published by Akshata Halli
15 ಫೆಬ್ರವರಿ 2024