* ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ ತನ್ನ ಪುತ್ರಿ ಅಸೀಫಾ ಭುಟ್ಟೋರನ್ನು ದೇಶದ ಪ್ರಥಮ ಮಹಿಳೆಯೆಂದು ಅಧಿಕೃತವಾಗಿ ಘೋಷಿಸಲಾಗಿದೆ.
* ಸಾಮಾನ್ಯವಾಗಿ ಈ ಸ್ಥಾನಮಾನ ಅಧ್ಯಕ್ಷರ ಪತ್ನಿಗೆ ಸಲ್ಲುತ್ತದೆ. ಆದರೆ ಇದೇ ಮೊದಲ ಬಾರಿಗೆ ಈ ಸ್ಥಾನ ಅಧ್ಯಕ್ಷರ ಪುತ್ರಿಗೆ ಸಲ್ಲಲಿದೆ. ಈ ಮೂಲಕ ಪಾಕಿಸ್ತಾನದ ರಾಜಕೀಯ ಮಹತ್ವದ ಅಧ್ಯಾಯವಾಗಿದೆ ಎಂದು ಎಆರ್ ವೈ ನ್ಯೂಸ್ ವರದಿ ಮಾಡಿದೆ.
* ಝರ್ದಾರಿಯವರ ಪತ್ನಿ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೋ 2007ರಲ್ಲಿ ಗುಂಡೇಟಿಗೆ ಪ್ರಾಣ ಕಳಕೊಂಡಿದ್ದಾರೆ. ಆದ್ದರಿಂದ ಅಧ್ಯಕ್ಷರ ಪುತ್ರಿ ಆಸಿಫಾ ಭುಟ್ಟೋಗೆ ಈ ಸ್ಥಾನಮಾನ ದೊರೆಯಲಿದೆ.
ಬುಧವಾರ, 13 ಮಾರ್ಚ್ 2024
12:48 ಅಪರಾಹ್ನ
Daily PDF
ಪಾಕಿಸ್ತಾನದ ಅಧ್ಯಕ್ಷರ ಪುತ್ರಿಗೆ ಪ್ರಥಮ ಮಹಿಳೆ ಪಟ್ಟ
Authored by:
Yallamma G