* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 6 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಜೊತೆಗೆ ಮೂವರು ರಾಜ್ಯಪಾಲರನ್ನು ಬೇರೆಡೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ನೇಮಕವಾಗಿದ್ದಾರೆ.
* ಅಸ್ಸಾಂಗೆ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ನೇಮಿಸಿದ್ದು, ಇವರಿಗೆ ಮಣಿಪುರದ ರಾಜ್ಯಪಾಲರಾಗಿಯೂ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಕೆ.ಕೈಲಾಸನಾಥನ್ ಅವರನ್ನು ಪುದುಚೇರಿಯ ಉಪ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.
* ವಿಧಿ 157 ಮತ್ತು 158 ರಾಜ್ಯಪಾಲರ ಅರ್ಹತೆಗಳು ಮತ್ತು ಅವರ ಕಚೇರಿಯ ಷರತ್ತುಗಳನ್ನು ತಿಳಿಸುತ್ತದೆ. ರಾಜ್ಯಪಾಲರು ಭಾರತದ ಪ್ರಜೆಯಾಗಿರಬೇಕು ಮತ್ತು 35 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು. ರಾಜ್ಯಪಾಲರು ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಸದಸ್ಯರಾಗಿರಬಾರದು ಮತ್ತು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
* ಭಾರತೀಯ ಸಂವಿಧಾನದ 153 ನೇ ವಿಧಿಯು "ಪ್ರತಿ ರಾಜ್ಯಕ್ಕೂ ಒಬ್ಬ ರಾಜ್ಯಪಾಲರಿರಬೇಕು" ಎಂದು ಹೇಳುತ್ತದೆ. ಸಂವಿಧಾನದ ಪ್ರಾರಂಭದ ಕೆಲವು ವರ್ಷಗಳ ನಂತರ, 1956 ರಲ್ಲಿ ತಿದ್ದುಪಡಿಯು "ಈ ಲೇಖನದಲ್ಲಿ ಯಾವುದೂ ಒಂದೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ಗವರ್ನರ್ ಆಗಿ ನೇಮಿಸುವುದನ್ನು ತಡೆಯುವುದಿಲ್ಲ" ಎಂದು ಹೇಳಿತು.
- 'ಮೇಘಾಲಯ' ರಾಜ್ಯಪಾಲರು - ವಿಜಯ್ ಶಂಕರ್
- 'ಪಂಜಾಬ್' ರಾಜ್ಯಪಾಲರು - ಗುಲಾಬ್ ಚಂದ್ ಕಟಾರಿಯಾ
- 'ರಾಜಸ್ಥಾನ' ರಾಜ್ಯಪಾಲರು - ಹರಿಭಾವು ಕಿಸಾನ್ ರಾವ್ ಬಾಗ್ಡೆ
- 'ತೆಲಂಗಾಣ' ರಾಜ್ಯಪಾಲರು - ಜಿಷ್ಣು ದೇವ್ ವರ್ಮಾ
- 'ಸಿಕ್ಕಿಂ' ರಾಜ್ಯಪಾಲರು - ಓಂ ಪ್ರಕಾಶ್ ಮಾಥುರ್
- 'ಜಾರ್ಖಂಡ್' ರಾಜ್ಯಪಾಲರು - ಸಂತೋಷ್ ಕುಮಾರ್ ಗಂಗ್ವಾರ್
- 'ಛತ್ತೀಸ್ ಗಢ' ರಾಜ್ಯಪಾಲರು - ರಾಮನ್ ದೇಕಾ
- 'ಮಹಾರಾಷ್ಟ್ರ' ರಾಜ್ಯಪಾಲರು - ಸಿ.ಪಿ.ರಾಧಾಕೃಷ್ಣನ್
- 'ಅಸ್ಸಾಂ' ರಾಜ್ಯಪಾಲರು - ಲಕ್ಷ್ಮಣ್ ಪ್ರಸಾದ್ ಆಚಾರ್ಯ
- ಮಾಜಿ ಐಎಎಸ್ ಅಧಿಕಾರಿ ಕೆ.ಕೈಲಾಶನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ.
ನೂತನ ರಾಜ್ಯಪಾಲರನ್ನು ನೇಮಕ ಮಾಡಿದ ರಾಷ್ಟ್ರಪತಿ ಮುರ್ಮು
Published by Bhagya R K
29 ಜುಲೈ 2024