* ಸಿನಿಮಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಪ್ರತಿಷ್ಠಿತ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ'ಯನ್ನು ಏಪ್ರಿಲ್ 24ರಂದು ನೀಡಿ ಗೌರವಿಸಲಾಗುತ್ತಿದೆ. ಮಂಗೇಶ್ಕರ್ ಕುಟುಂಬವು ಈ ಪ್ರಶಸ್ತಿಯನ್ನು ನೀಡುತ್ತಿದೆ.
* ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್ ಬಚ್ಚನ್ (Amitabh Bachchan) ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ಮೂಲಕ ಪ್ರಶಸ್ತಿ ಘೋಷಣೆ ಮಾಡಲಾಯಿತು. ಈ ಮೊದಲು ಇದೇ ಪ್ರಶಸ್ತಿ ಪಡೆದ ನರೇಂದ್ರ ಮೋದಿ ಹಾಗೂ ಗಾಯಕಿ ಆಶಾ ಭೋಂಸ್ಲೆ ಅವರ ಸಾಲಿಗೆ ಈಗ ಅಮಿತಾಭ್ ಬಚ್ಚನ್ ಸೇರ್ಪಡೆ ಆಗುತ್ತಿದ್ದಾರೆ.
* ‘ಭಾರತ ರತ್ನ’ ಪ್ರಶಸ್ತಿ ಪುರಸ್ಕೃತೆ ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ‘ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ’ ನೀಡುತ್ತಿರುವ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸುತ್ತದೆ. ಅಮಿತಾಬ್ ಬಚ್ಚನ್ ಅವರ ಜೊತೆಗೆ ಅತ್ಯುತ್ತಮ ಸಾಧನೆ ಮಾಡಿದ ಹಲವಾರು ದಿಗ್ಗಜರಿಗೆ ಈ ಪ್ರಶಸ್ತಿ ಲಭಿಸುತ್ತಿದೆ.
* ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯ ಜೊತೆಗೆ ‘ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಹಿರಿಯ ಮರಾಠಿ ಸಿನಿಮಾ ಕಲಾವಿದ ಅಶೋಕ್ ಸರಾಫ್, ಮರಾಠಿ ನಟಿ ಪದ್ಮಿನಿ ಕೊಲ್ಹಾಪುರೆ, ಗಾಯಕ ರೂಪ್‌ಕುಮಾರ್ ರಾಥೋಡ್, ಮರಾಠಿ ರಂಗಭೂಮಿಯ ದಿಗ್ಗಜ ಅತುಲ್ ಪರ್ಚುರೆ, ಖ್ಯಾತ ಲೇಖಕಿ ಮಂಜಿರಿ ಫಡ್ಕೆಮತ್ತು ನಟ, ನಿರ್ದೇಶಕ, ನಿರ್ಮಾಪಕ ರಣದೀಪ್ ಹೂಡಾ ಅವರಿಗೆ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
* ಕಳೆದ 34 ವರ್ಷಗಳಲ್ಲಿ 212 ಗಣ್ಯ ವ್ಯಕ್ತಿಗಳನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ.
ಶುಕ್ರವಾರ, 19 ಎಪ್ರಿಲ್ 2024
11:10 ಪೂರ್ವಾಹ್ನ
Daily PDF
ನಟ ಅಮಿತಾಭ್ ಬಚ್ಚನ್ಗೆ ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ
Authored by:
Yallamma G