* ಯಕೃತ್ತಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ.
* ವಿಶ್ವ ಯಕೃತ್ತಿನ ದಿನದ 2024 ರ ಥೀಮ್ " ನಿಮ್ಮ ಯಕೃತ್ತು ಆರೋಗ್ಯಕರವಾಗಿ ಮತ್ತು ರೋಗ ಮುಕ್ತವಾಗಿರಲಿ ".
* ಕಣ್ಣು, ಚರ್ಮ ಹಾಗೂ ಮುಖದಲ್ಲಿ ಗೋಚರವಾಗುವ ಈ ಕೆಲವು ಲಕ್ಷಣಗಳು ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಿರುವುದನ್ನು ಸೂಚಿಸಬಹುದು.
* ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 1990 ರಿಂದ 2017ರ ನಡುವೆ ಯಕೃತ್ತಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 100ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಮೂರನೇ ಎರಡರಷ್ಟು ವೈರಲ್ ಹೆಪಟೈಟಿಸ್‌ಗೆ ಕಾರಣವಾಗಿದೆ ಹಾಗೂ ಶೇ 16ರಷ್ಟು ಎನ್‌ಎಎಫ್‌ಎಲ್‌ಡಿ ಸೇರಿದಂತೆ ಕಾರಣಗಳನ್ನು ಗುರುತಿಸಲಾಗದ ಸಮಸ್ಯೆಗಳಾಗಿವೆ.
* ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ದಿ ಲಿವರ್ (EASL) 2010 ರಲ್ಲಿ ವಿಶ್ವ ಯಕೃತ್ತಿನ ದಿನವನ್ನು ಪ್ರಾರಂಭಿಸಿತು. 1966 ರಲ್ಲಿ EASL ಸ್ಥಾಪನೆಯ ನೆನಪಿಗಾಗಿ ಏಪ್ರಿಲ್ 19 ರಂದುಈ ದಿನವನ್ನು ಸ್ಥಾಪಿಸಲಾಯಿತು.
ಏಪ್ರಿಲ್ 19 ವಿಶ್ವ ಯಕೃತ ದಿನ
Published by Yallamma G
19 ಏಪ್ರಿಲ್ 2024