* ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2025 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು (Nobel Prize 2025) ಸುಸುಮು ಕಿಟಗಾವಾ, ರಿಚರ್ಡ್ ರಾಬ್ಸನ್ ಮತ್ತು ಒಮರ್ ಎಂ. ಯಾಘಿ ಅವರಿಗೆ ನೀಡಲು ನಿರ್ಧರಿಸಿದೆ. ಈ ಪ್ರಶಸ್ತಿಯನ್ನು ಈ ಬಾರಿ ಮೂವರು ವಿಜ್ಞಾನಿಗಳು ಪಡೆದುಕೊಂಡಿದ್ದಾರೆ.
* ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನೀಡುವ ನೊಬೆಲ್ ಪ್ರಶಸ್ತಿಯನ್ನು ಆಯಾ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗಿದೆ.
* ಮೆಟಲ್ ಆರ್ಗಾನಿಕ್ ಫ್ರೇಮ್ವರ್ಕ್ ಅಭಿವೃದ್ಧಿ ಕ್ಷೇತ್ರದ ಅವರ ಸಾಧನೆಗಾಗಿ ಈ ಬಾರಿಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
* ಕಳೆದ ವರ್ಷದ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯು ಕಂಪ್ಯೂಟೇಶನಲ್ ಪ್ರೋಟೀನ್ ವಿನ್ಯಾಸ ಮತ್ತು ಪ್ರೋಟೀನ್ ರಚನೆಯ ಮುನ್ಸೂಚನೆಯಲ್ಲಿನ ಪ್ರಗತಿಯ ಕ್ಷೇತ್ರದಲ್ಲಿನ ಸಾಧನೆಗೆ ನೀಡಲಾಗಿತ್ತು. ಇದು ಔಷಧ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ನಾವೀನ್ಯತೆಗೆ ಉತ್ತೇಜನ ನೀಡಿದ ಕ್ಷೇತ್ರಗಳಾಗಿತ್ತು.
* 2025ರ ನೊಬೆಲ್ ಪ್ರಶಸ್ತಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (SEK) ಮೊತ್ತವನ್ನು ನಿಗದಿಪಡಿಸಲಾಗಿದೆ. ಸ್ವೀಡಿಷ್ ಕ್ರೋನರ್ (SEK) ಎಂಬುದು ನೊಬೆಲ್ ಪ್ರಶಸ್ತಿಗಳನ್ನು ನೀಡುವ ಸ್ವೀಡನ್‌ನ ಕರೆನ್ಸಿಯಾಗಿದೆ. 11 ಮಿಲಿಯನ್ ಸ್ವೀಡಿಷ್ ಕ್ರೋನರ್ ಮೊತ್ತವು ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 10.38 ಕೋಟಿ ರೂ.ಗಳಷ್ಟಾಗುತ್ತದೆ.
Nobel Prize 2025 : ಸುಸುಮು ಕಿಟಗಾವಾ, ರಿಚರ್ಡ್ ರಾಬ್ಸನ್ ಮತ್ತು ಒಮರ್ ಎಂ. ಯಾಘಿ ಅವರಿಗೆ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
Published by Yallamma G
09 ಅಕ್ಟೋಬರ್ 2025