➤ ಭಾರತೀಯ ನೌಕಾಪಡೆಯ ನೌಕಾಯಾನ ಹಡಗು 'ಐಎನ್‌ಎಸ್‌ವಿ ನೀಲಕಂಠ' (INSV Neelkanth) ವಿಶಾಖಪಟ್ಟಣದಿಂದ ಶ್ರೀ ವಿಜಯಪುರಂವರೆಗಿನ (ಪೋರ್ಟ್ ಬ್ಲೇರ್) 700 ನಾಟಿಕಲ್ ಮೈಲಿಗಳ ಸವಾಲಿನ ಸಮುದ್ರ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
- ಸಂದರ್ಭ: ಭಾರತದ ಏಕೈಕ ಜಂಟಿ ಸೇವಾ ಪಡೆಯಾಗಿರುವ 'ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್' (ANC) ಸ್ಥಾಪನೆಯಾಗಿ 25 ವರ್ಷಗಳು (ಬೆಳ್ಳಿ ಹಬ್ಬ - Silver Jubilee) ಪೂರೈಸಿದ ಹಿನ್ನೆಲೆಯಲ್ಲಿ ಈ ಕಡಲ ಯಾನವನ್ನು ಆಯೋಜಿಸಲಾಗಿತ್ತು.
- ಧ್ವೇಯವಾಕ್ಯ (Motto): "Together We Sail, Together We Conquer" (ಒಟ್ಟಾಗಿ ಪಯಣಿಸೋಣ, ಒಟ್ಟಾಗಿ ಗೆಲ್ಲೋಣ).
- ಪ್ರಾರಂಭ: ಸೆಪ್ಟೆಂಬರ್ 27, 2026 ರಂದು ವಿಶಾಖಪಟ್ಟಣದಿಂದ ಯಾನ ಆರಂಭವಾಗಿತ್ತು.
- ಅಂತರ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಅಂಡಮಾನ್‌ನ ಶ್ರೀ ವಿಜಯಪುರಂವರೆಗೆ ಸುಮಾರು 700 ನಾಟಿಕಲ್ ಮೈಲಿ (ಅಂದಾಜು 1,296 ಕಿ.ಮೀ).
➤ ಸ್ವಾಗತ ಮತ್ತು ಕಡಲ ಗೌರವ: ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ವೈಸ್ ಅಡ್ಮಿರಲ್ ವಿನೀತ್ ಮೆಕ್ಕಾರ್ಥಿ ಅವರು J-24 ಸೈಲ್ ಬೋಟ್ ಮೂಲಕ ಸಮುದ್ರದಲ್ಲೇ ಸಾಹಸ ನೌಕೆಯನ್ನು ಬರಮಾಡಿಕೊಂಡರು. ಶ್ರೀ ವಿಜಯಪುರಂನ ಮರೀನಾ ಬೇಯಲ್ಲಿ ಆಗಿ 'ಫ್ಲ್ಯಾಗ್ ಇನ್' ನೆರವೇರಿಸಲಾಯಿತು.
- ಗೌರವ ಸಲ್ಲಿಕೆ: ಭಾರತೀಯ ನೌಕಾಪಡೆ (Indian Navy) ಹಾಗೂ ಭಾರತೀಯ ಕರಾವಳಿ ರಕ್ಷಣಾ ಪಡೆಯ (Indian Coast Guard) ಒಟ್ಟು 8 ಯುದ್ಧನೌಕೆಗಳು (6 ನೌಕಾಪಡೆಯ ಹಡಗುಗಳು + 2 ಕರಾವಳಿ ರಕ್ಷಣಾ ಪಡೆಯ ಹಡಗುಗಳು) ಕಡಲಿನಲ್ಲಿ ಗೌರವ ಪಥ (Honour Corridor) ನಿರ್ಮಿಸಿ INSV ನೀಲಕಂಠ ನೌಕೆಗೆ ಸ್ವಾಗತ ಕೋರಿದವು.
- ಬೆಂಬಲ ನೌಕೆಗಳು: ಸಾಹಸ ಯಾನಕ್ಕೆ ಸಾಥ್ ನೀಡಲು 3 'ಲೇಸರ್ ಕ್ಲಾಸ್' ಮತ್ತು 5 'ಆಪ್ಟಿಮಿಸ್ಟ್ ಕ್ಲಾಸ್' ಸೈಲಿಂಗ್ ಬೋಟ್‌ಗಳು ಭಾಗವಹಿಸಿದ್ದವು.