➤ ಮುಂಬರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ (Asian Para Games 2026) ಕ್ರೀಡಾಕೂಟಕ್ಕೆ ಭಾರತದ ಧ್ವಜಧಾರಕರಾಗಿ (Flagbearers) ಖ್ಯಾತ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಹಾಗೂ ಪ್ಯಾರಾ ಟೇಬಲ್ ಟೆನ್ನಿಸ್ ತಾರೆ ಭಾವಿನಾ ಪಟೇಲ್ ಅವರನ್ನು ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (PCI) ಅಧಿಕೃತವಾಗಿ ಆಯ್ಕೆ ಮಾಡಿದೆ.
- ಆವೃತ್ತಿ (Edition): 5ನೇ ಏಷ್ಯನ್ ಪ್ಯಾರಾ ಗೇಮ್ಸ್
- ಆತಿಥೇಯ ನಗರ / ದೇಶ: ಐಚಿ-ನಗೋಯ (Aichi-Nagoya), ಜಪಾನ್
- ದಿನಾಂಕ: ಅಕ್ಟೋಬರ್ 18 ರಿಂದ 24, 2026 
- ಭಾರತದ ಧ್ವಜಧಾರಕರು: ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್) & ಭಾವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನ್ನಿಸ್)
- ಆಯೋಜಕ ಸಂಸ್ಥೆ: ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (PCI - Paralympic Committee of India)
➤ ಭಾರತದ ಧ್ವಜಧಾರಕರ ಸಾಧನೆಗಳು:
1. ಪ್ರಮೋದ್ ಭಗತ್ (Pramod Bhagat - Para Badminton)
- ರಾಜ್ಯ: ಒಡಿಶಾ (ಬರ್ಗಢ್ ಜಿಲ್ಲೆ).
- ಏಷ್ಯನ್ ಪ್ಯಾರಾ ಗೇಮ್ಸ್ ಸಾಧನೆ: 2014 ರಿಂದ 2023 ರವರೆಗೆ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಒಟ್ಟು 6 ಪದಕಗಳನ್ನು (2 ಚಿನ್ನ ಸೇರಿದಂತೆ) ಗೆದ್ದಿದ್ದಾರೆ.
- ವಿಶೇಷತೆ: ಭಾರತದ ಅತ್ಯಂತ ಯಶಸ್ವಿ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಲ್ಲಿ ಒಬ್ಬರು.
2. ಭಾವಿನಾ ಪಟೇಲ್ (Bhavina Patel - Para Table Tennis)
- ಕ್ರೀಡೆ: ಪ್ಯಾರಾ ಟೇಬಲ್ ಟೆನ್ನಿಸ್ (Class 4).
- ಏಷ್ಯನ್ ಪ್ಯಾರಾ ಗೇಮ್ಸ್ ಸಾಧನೆ: ಈವರೆಗೆ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 2 ಪದಕಗಳನ್ನು ಜಯಿಸಿದ್ದಾರೆ.
- ವಿಶೇಷ ಸಾಧನೆ: 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನ್ನಿಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.
➤ ಹಿಂದಿನ ಆವೃತ್ತಿಯ ಸಾಧನೆ : ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಕಳೆದ (2022) ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿತ್ತು:
- ಒಟ್ಟು ಪದಕಗಳು: 111
- ಚಿನ್ನದ ಪದಕಗಳು: 29