➤ ಪ್ರತಿವರ್ಷ ಅಕ್ಟೋಬರ್ 2ರಿಂದ 8ರವರೆಗೆ ಭಾರತದಾದ್ಯಂತ ರಾಷ್ಟ್ರೀಯ ವನ್ಯಜೀವಿ ಸಪ್ತಾಹವನ್ನು (National Wildlife Week) ಆಚರಿಸಲಾಗುತ್ತದೆ. ವನ್ಯಜೀವಿಗಳ ಸಂರಕ್ಷಣೆ, ಜೀವವೈವಿಧ್ಯತೆಯ ರಕ್ಷಣೆ ಹಾಗೂ ಪರಿಸರ ಸಮತೋಲನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಾರಪೂರ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. 2026ರಲ್ಲಿ ಭಾರತವು 72ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹವನ್ನು ಆಚರಿಸುತ್ತಿದೆ.
➤ 2026ರ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಧೇಯ್ವಾಕ್ಯ (Theme): "Connecting Habitats, Thriving Wildlife" (ಆವಾಸಸ್ಥಾನಗಳ ಜೋಡಣೆ, ವನ್ಯಜೀವಿಗಳ ಸಮೃದ್ಧಿ)   
➤ ಆವಾಸಸ್ಥಾನ ಸಂಪರ್ಕದ ಪ್ರಾಮುಖ್ಯತೆ:
- ಸುರಕ್ಷಿತ ಸಂಚಾರ: ಪ್ರಾಣಿಗಳು ಆಹಾರ, ನೀರು ಮತ್ತು ಸಂತಾನೋತ್ಪತ್ತಿಗಾಗಿ ಒಂದು ಅರಣ್ಯದಿಂದ ಮತ್ತೊಂದಕ್ಕೆ ಸುರಕ್ಷಿತವಾಗಿ ಚಲಿಸಲು ನೆರವಾಗುತ್ತದೆ.   
- ಮಾನವ-ವನ್ಯಜೀವಿ ಸಂಘರ್ಷ ಕಡಿತ: ವನ್ಯಮೃಗಗಳು ಜನವಸತಿ ಪ್ರದೇಶಗಳಿಗೆ ಬರುವುದನ್ನು ತಡೆಯುತ್ತದೆ.   
- ತಳಿ ವೈವಿಧ್ಯತೆ (Genetic Diversity): ಪ್ರತ್ಯೇಕಗೊಂಡ ಪ್ರಾಣಿ ಸಮೂಹಗಳ ನಡುವೆ ಸಂತಾನೋತ್ಪತ್ತಿ ಸುಲಭವಾಗಿ, ತಳಿ ಸಾಂದ್ರತೆ ಹೆಚ್ಚುತ್ತದೆ.   
➤ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಐತಿಹಾಸಿಕ ಹಿನ್ನೆಲೆ: ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಗೆ ಐತಿಹಾಸಿಕ ಹಿನ್ನೆಲೆಯಿದ್ದು, ಪ್ರಮುಖ ಮೈಲಿಗಲ್ಲುಗಳು ಕೆಳಗಿನಂತಿವೆ:
- 1952: ಕೇಂದ್ರ ಸರ್ಕಾರದಿಂದ 'ಭಾರತೀಯ ವನ್ಯಜೀವಿ ಮಂಡಳಿ' (Indian Board for Wildlife - IBWL) ಸ್ಥಾಪನೆ.
- 1955: ದೇಶದಲ್ಲೇ ಮೊದಲ ಬಾರಿಗೆ 'ರಾಷ್ಟ್ರೀಯ ವನ್ಯಜೀವಿ ದಿನ' (National Wildlife Day) ಆಚರಣೆ.
- 1957: ಜಾಗೃತಿ ವ್ಯಾಪಕಗೊಳಿಸಲು ಇದನ್ನು ಒಂದು ದಿನದ ಬದಲಿಗೆ 'ವನ್ಯಜೀವಿ ಸಪ್ತಾಹ' (Weekly Event) ಆಗಿ ವಿಸ್ತರಿಸಲಾಯಿತು.
- 1972: ವನ್ಯಜೀವಿಗಳನ್ನು ಕಾನೂನುಬಾಹಿರ ಬೇಟೆ ಮತ್ತು ಕಳ್ಳಸಾಗಣೆಯಿಂದ ರಕ್ಷಿಸಲು 'ವನ್ಯಜೀವಿ ಸಂರಕ್ಷಣಾ ಕಾಯ್ದೆ-1972' (Wildlife Protection Act, 1972) ಜಾರಿ.
➤ ಪ್ರಮುಖ ಲಕ್ಷಣಗಳು ಹಾಗೂ ಆಚರಣೆಯ ಉದ್ದೇಶಗಳು:
- ಅಳಿವಿನಂಚಿನಲ್ಲಿರುವ ತಳಿಗಳ ರಕ್ಷಣೆ: ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿ ಪ್ರಭೇದಗಳ ಸಂರಕ್ಷಣೆ.   
- ಕಳ್ಳಬೇಟೆ ತಡೆ: ಅನಧಿಕೃತ ಬೇಟೆ ಮತ್ತು ಕಾನೂನುಬಾಹಿರ ವನ್ಯಜೀವಿ ಅಂಗಾಂಗ ಕಳ್ಳಸಾಗಣೆಯ ವಿರುದ್ಧ ಕಠಿಣ ಜಾಗೃತಿ.   
- ಸಂರಕ್ಷಿತ ಪ್ರದೇಶಗಳ ಪಾತ್ರ: ರಾಷ್ಟ್ರೀಯ ಉದ್ಯಾನವನಗಳು (National Parks) ಮತ್ತು ಅಭಯಾರಣ್ಯಗಳ (Wildlife Sanctuaries) ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು.