➤ ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು (National Sports Day) ಆಚರಿಸಲಾಗುತ್ತದೆ. ಭಾರತೀಯ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ (Major Dhyan Chand) ಅವರ ಜನ್ಮದಿನದ ಸವಿನೆನಪಿಗಾಗಿ ಈ ದಿನವನ್ನು ದೇಶಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 2026 ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಆಗಸ್ಟ್ 28 ರಿಂದ ಆಗಸ್ಟ್ 30 ರವರೆಗೆ 3 ದಿನಗಳ ಕಾಲ ದೇಶಾದ್ಯಂತ ಅಭಿಯಾನವಾಗಿ ಆಚರಿಸುತ್ತಿದೆ.
➤ 2026ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಥೀಮ್ (Theme): "Tribute, Play, and Move" (ಶ್ರದ್ಧಾಂಜಲಿ, ಆಟ ಮತ್ತು ಚಲನೆ)
➤ ಪ್ರಮುಖ ಕಾರ್ಯಕ್ರಮಗಳು: ಇಂಫಾಲದ BRIC-IBSD ಸಂಸ್ಥೆ ಸೇರಿದಂತೆ ದೇಶಾದ್ಯಂತ ಕ್ರೀಡಾ ಪ್ರಾಧಿಕಾರಗಳು (SAI) ವಿವಿಧ ಸ್ಪರ್ಧೆಗಳು, 'ಫಿಟ್ ಇಂಡಿಯಾ ಪ್ಲೆಡ್ಜ್' (Fit India Pledge) ಹಾಗೂ ಆಗಸ್ಟ್ 30 ರಂದು "Sundays on Cycle" ಬೈಸಿಕಲ್ ರ‍್ಯಾಲಿ ಮೂಲಕ ಕಾರ್ಯಕ್ರಮವನ್ನು ಪೂರ್ಣಗೊಳಿಸುತ್ತಿವೆ.
➤ ಮೇಜರ್ ಧ್ಯಾನ್ ಚಂದ್: ಹಾಕಿಯ ಮಾಂತ್ರಿಕ: ಮೇಜರ್ ಧ್ಯಾನ್ ಚಂದ್ ಅವರು 1905 ರ ಆಗಸ್ಟ್ 29 ರಂದು ಜನಿಸಿದರು. ಭಾರತೀಯ ಹಾಕಿಯನ್ನು ವಿಶ್ವಮಟ್ಟದಲ್ಲಿ ಉನ್ನತ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲುತ್ತದೆ.
1.ಆಲಿಂಪಿಕ್ಸ್ ಬಂಗಾರದ ಬೇಟೆ: ಭಾರತ ತಂಡವು 1928 (ಆಮ್‌ಸ್ಟರ್‌ಡ್ಯಾಮ್), 1932 (ಲಾಸ್ ಏಂಜಲೀಸ್), ಮತ್ತು 1936 (ಬರ್ಲಿನ್) ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಧ್ಯಾನ್ ಚಂದ್ ಪ್ರಮುಖ ಪಾತ್ರ ವಹಿಸಿದ್ದರು.
2.ಬರ್ಲಿನ್ ಒಲಿಂಪಿಕ್ಸ್ 1936: ಧ್ಯಾನ್ ಚಂದ್ ಅವರ ನಾಯಕತ್ವದಲ್ಲಿ ಭಾರತ ತಂಡವು ಫೈನಲ್‌ನಲ್ಲಿ ಜರ್ಮನಿಯನ್ನು 8-1 ಅಂತರದಿಂದ ಸೋಲಿಸಿ ಬಂಗಾರವನ್ನು ಮುಡಿಗೇರಿಸಿಕೊಂಡಿತು.
3.ಸಾಧನೆ: 1926 ರಿಂದ 1948 ರವರೆಗಿನ ತಮ್ಮ ವೃತ್ತಿಜೀವನದಲ್ಲಿ ಅವರು 1,000 ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾರೆ.
4.ಸಾಮಾಜಿಕ ಗೌರವ: ಭಾರತ ಸರ್ಕಾರವು 1956 ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
➤ 'ಫಿಟ್ ಇಂಡಿಯಾ' ಚಳವಳಿ (Fit India Movement): ಕ್ರೀಡಾ ದಿನಾಚರಣೆಯು ಕೇವಲ ಕ್ರೀಡಾ ಸಾಧನೆಗಳ ಆಚರಣೆಗೆ ಸೀಮಿತವಾಗಿರದೆ, ಸಾರ್ವಜನಿಕರ ಆರೋಗ್ಯದ ಚಳವಳಿಯಾಗಿ ಮಾರ್ಪಟ್ಟಿದೆ.
ಆರಂಭ: 2019 ರ ಆಗಸ್ಟ್ 29 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ Fit India Movement ಗೆ ಚಾಲನೆ ನೀಡಿದರು.
ಉದ್ದೇಶ: ದೈನಂದಿನ ಜೀವನದಲ್ಲಿ ಕಾಯಿಕ ಶ್ರಮ ಹಾಗೂ ವ್ಯಾಯಾಮವನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ಭಾರತೀಯನೂ ಆರೋಗ್ಯವಾಗಿರುವಂತೆ ಪ್ರೇರೇಪಿಸುವುದು.
ಶನಿವಾರ, 29 ಆಗಸ್ಟ್ 2026
10:47 ಪೂರ್ವಾಹ್ನ
Daily PDF
ರಾಷ್ಟ್ರೀಯ ಕ್ರೀಡಾ ದಿನಾಚರಣೆ 2026
Authored by:
Yallamma G