* 'ನಾರಿ ಶಕ್ತಿ ಅನಾವರಣಕ್ಕೆ 2024ರ ಜನವರಿಯಲ್ಲಿ ಜರುಗುವ ಗಣರಾಜ್ಯೋತ್ಸವವನ್ನು ಮೀಸಲಿರಿಸಲು ಕೇಂದ್ರ ಸರಕಾರ ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಗೃಹ ಸಚಿವಾಲಯ ಜಂಟಿಯಾಗಿ ಯೋಜನೆ ರೂಪಿಸಿವೆ.
* ರಕ್ಷಣಾ ಪಡೆಗಳಿಗೆ ಮತ್ತು ಇತರ ಪ್ರಮುಖರಿಗೆ ರಕ್ಷಣಾ ಇಲಾಖೆಯ ಸಾಂಪ್ರದಾಯಿಕ ಶಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, 'ಕರ್ತವ್ಯ ಪಥ'ದಲ್ಲಿ ನಡೆಯುವ ಪಥ ಸಂಚಲನ, ಬ್ಯಾಂಡ್, ಸ್ತಬ್ಧಚಿತ್ರ, ಕಲಾ ಪ್ರದರ್ಶನಗಳನ್ನೆಲ್ಲದರಲ್ಲಿ ಕೇವಲ ಮಹಿಳಾ ಅಧಿಕಾರಿಗಳು, ಮಹಿಳಾ ಕಲಾವಿದರು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
'ನಾರಿ ಶಕ್ತಿ' ಅನಾವರಣ
Published by Yallamma G
09 ಮೇ 2023