➤ ಈ ಮ್ಯೂಸಿಯಂ ಅನ್ನು 2022 ರಲ್ಲಿ ಸ್ಥಾಪಿಸಲಾಗಿದ್ದು, ಇದು ಜಾಗತಿಕವಾಗಿ ಅತ್ಯಂತ ಶ್ರೀಮಂತ ಜೀವವೈವಿಧ್ಯ ವಲಯವಾಗಿರುವ ಇಂಡೋ-ಬರ್ಮಾ ಬಯೋಡೈವರ್ಸಿಟಿ ಹಾಟ್‌ಸ್ಪಾಟ್ (Indo-Burma Biodiversity Hotspot) ವ್ಯಾಪ್ತಿಯಲ್ಲಿ ಬರುತ್ತದೆ.
➤ ನಿಯೋಜಿತ ರೆಪೊಸಿಟರಿ: ಜೈವಿಕ ವೈವಿಧ್ಯತೆ ಕಾಯ್ದೆ 2002 ರ ಅಡಿಯಲ್ಲಿ ನಿಯೋಜನೆಗೊಳ್ಳುವ ರೆಪೊಸಿಟರಿಗಳು ಕೇವಲ ಪ್ರವಾಸಿ ಮ್ಯೂಸಿಯಂ ಆಗಿರುವುದಿಲ್ಲ. ಇವು ಶಾಸನಬದ್ಧ ವೈಜ್ಞಾನಿಕ ಕಾರ್ಯಗಳನ್ನು ನಿರ್ವಹಿಸುತ್ತವೆ.
- ಹೊಸದಾಗಿ ಪತ್ತೆಯಾಗುವ ಸಸ್ಯ, ಪ್ರಾಣಿ ಅಥವಾ ಶಿಲೀಂಧ್ರಗಳ ಅಧಿಕೃತ ಮಾದರಿಗಳನ್ನು (Voucher and Type Specimens) ಇಲ್ಲಿ ಕಾನೂನುಬದ್ಧವಾಗಿ ಸಂರಕ್ಷಿಸಿಡಲಾಗುತ್ತದೆ.
- ಸಂಶೋಧನೆ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುವ ಜೈವಿಕ ಸಂಪನ್ಮೂಲಗಳ ಪತ್ತೆಹಚ್ಚುವಿಕೆಯನ್ನು (Traceability) ಇದು ಸುಲಭಗೊಳಿಸುತ್ತದೆ.
- ಪ್ರಕೃತಿ ವಿಕೋಪ ಅಥವಾ ಪರಿಸರ ನಾಶದಿಂದಾಗಿ ಪ್ರಭೇದಗಳು ಅಳಿವಿನ ಅಂಚಿಗೆ ಸರಿದಾಗ, ಪರಿಸರ ಪುನಃಶ್ಚೇತನಕ್ಕೆ (Ecological Restoration) ಇವು ನೆರವಾಗುತ್ತವೆ.
ಯಾವುದೇ ಉದ್ಯೋಗದ ಅಪ್ಡೇಟ್ ಮಿಸ್ ಮಾಡಿಕೊಳ್ಳಬೇಡಿ; ಕ್ಷಣಕ್ಷಣದ ಮಾಹಿತಿಗಾಗಿ 'KPSCVaani' ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.