➤ ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, "ವಿದ್ಯಾರ್ಥಿಗಳಲ್ಲಿ ಸಾಂವಿಧಾನಿಕ ಮೌಲ್ಯಗಳು, ದೇಶದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಗೌರವ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ. ಈ ಆದೇಶವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಲಿದೆ.
➤ ರಾಷ್ಟ್ರಗೀತೆ: ಜನ ಗಣ ಮನ (National Anthem)
-
ರಚನಾಕಾರರು: ರವೀಂದ್ರನಾಥ ಟ್ಯಾಗೋರ್ (ಮೂಲತಃ ಬಂಗಾಳಿ ಭಾಷೆಯ 'ಭಾರತ ಭಾಗ್ಯ ಬಿಧಾತಾ' ಕವನದಿಂದ ಆಯ್ದುಕೊಳ್ಳಲಾಗಿದೆ).
-
ಮೊದಲ ಬಾರಿಗೆ ಹಾಡಿದ್ದು: ಡಿಸೆಂಬರ್ 27, 1911 ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧಿವೇಶನದಲ್ಲಿ.
-
ಸಂವಿಧಾನದ ಅಂಗೀಕಾರ: ಜನವರಿ 24, 1950 ರಂದು ಭಾರತದ ಸಂವಿಧಾನ ರಚನಾ ಸಭೆಯು ಇದನ್ನು ಅಧಿಕೃತವಾಗಿ ರಾಷ್ಟ್ರಗೀತೆಯಾಗಿ ಅಂಗೀಕರಿಸಿತು.
-
ಗಾಯನದ ಅವಧಿ: ಇಡೀ ರಾಷ್ಟ್ರಗೀತೆಯನ್ನು ಹಾಡಲು ನಿಗದಿಪಡಿಸಿದ ಪ್ರಮಾಣಿತ ಸಮಯ 52 ಸೆಕೆಂಡುಗಳು.
-
ರಚನಾಕಾರರು: ಬಂಕಿಮ ಚಂದ್ರ ಚಟರ್ಜಿ (೧೮೭೦ರ ದಶಕದಲ್ಲಿ ರಚನೆ).
-
ಮೂಲ ಆಕರ: ಬಂಕಿಮ ಚಂದ್ರರ ಪ್ರಸಿದ್ಧ ಕಾದಂಬರಿ 'ಆನಂದಮಠ' (1882 ರಲ್ಲಿ ಪ್ರಕಟಣೆ).
-
ಮೊದಲ ಬಾರಿಗೆ ಹಾಡಿದ್ದು: 1896 ರ ಕಲ್ಕತ್ತಾ ಐಎನ್‌ಸಿ (INC) ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಈ ಗೀತೆಯನ್ನು ಹಾಡಿದ್ದರು.
-
ಸ್ಥಾನಮಾನ: ಜನವರಿ 24, 1950 ರಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು 'ವಂದೇ ಮಾತರಂ' ಗೀತೆಗೆ 'ಜನ ಗಣ ಮನ' ಗೀತೆಯಷ್ಟೇ ಸಮಾನ ಗೌರವ ಮತ್ತು ಸ್ಥಾನಮಾನವನ್ನು ಘೋಷಿಸಿದರು.