* ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ವಿಶ್ವ ಸುಂದರಿ-2024 ನೇ ಸಾಲಿನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 28 ವರ್ಷಗಳ ನಂತರ ಭಾರತದಲ್ಲಿ 71 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯನ್ನು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಆಯೋಜಿಸಿತ್ತು. ಈ ಸ್ಪರ್ಧೆಗಳಲ್ಲಿ 112 ದೇಶಗಳ ಸೌಂದರ್ಯ ರಾಣಿಯರು ಸ್ಪರ್ಧಿಸಿದರು.
* ಈ ಬಾರಿ ಕರ್ನಾಟಕ ಮೂಲದ ಸಿನಿ ಶೆಟ್ಟಿ ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಭಾಗಿ ಆಗಿದ್ದರು.
* ಈ ಮೊದಲು ಭಾರತದ ಐಶ್ವರ್ಯಾ, ಪ್ರಿಯಾಂಕಾ ಚೋಪ್ರಾ ಮೊದಲಾದವರು ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದಿದ್ದಾರೆ. ಲೆಬನಾನ್ ನ ಯಾಸ್ಮಿನಾ ಜೈತೌನ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ.
* ಈ ಹಿಂದೆ 1996ರಲ್ಲಿ ವಿಶ್ವ ಸಂದರಿ ಸ್ಪರ್ಧೆ ಭಾರತದಲ್ಲಿ ನಡೆದಿತ್ತು. ಆಗ ಗ್ರೀಸ್‌ನ ಸ್ಕ್ಲಿವಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 28 ವರ್ಷಗಳ ನಂತರ ಭಾರತದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
* ಇದೇ ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ನೀತಾ ಅಂಬಾನಿ ʼ ಅವರು ಮಿಸ್ ವರ್ಲ್ಡ್ ಹ್ಯುಮಾನಿಟೇರಿಯನ್ʼ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸೋಮವಾರ, 11 ಮಾರ್ಚ್ 2024
10:52 ಪೂರ್ವಾಹ್ನ
Daily PDF
Miss World 2024: ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ ಪಿಸ್ಕೋವಾ
Authored by:
Bhagya R K