* ವಿಶ್ವದ ದಕ್ಷಿಣ ಭಾಗದಲ್ಲಿರುವ 125 ರಾಷ್ಟ್ರಗಳು ಭಾರತದ ನಾಯಕತ್ವದ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
* ಭಾರತ ಮತ್ತು ಜಪಾನ್ ಸಹಭಾಗಿತ್ವದ ನಿಕೇಹಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಎಸ್. ಜೈಶಂಕರ್ ಅವರು, 'ದಕ್ಷಿಣದ ರಾಷ್ಟ್ರಗಳು ಹಲವು ವಿಷಯಗಳಲ್ಲಿ ಪರಸ್ಪರ ಸಹಮತ ಹೊಂದಿವೆ' ಎಂದು ಅಭಿಪ್ರಾಯಪಟ್ಟರು.
* 'ಪರಸ್ಪರ ಸಹಮತ ಹೊಂದುವ ನಿಲುವಿಗೆ ಕೋವಿಡ್ ಸ್ಥಿತಿ ಬಳಿಕ ಹೆಚ್ಚಿನ ಬಲ ಬಂದಿದೆ. ಭಾರತ ಜಿ20 ಶೃಂಗದ ಅಧ್ಯಕ್ಷತೆ ವಹಿಸಿಕೊಳ್ಳುವವರೆಗೆ, ನಮ್ಮ ರಾಷ್ಟ್ರಗಳಿಗೆ ಸಂಬಂಧಿಸಿದ ವಿಷಯಗಳು ಜಿ20 ಕಾರ್ಯಸೂಚಿಯಲ್ಲೂ ಇರುವುದಿಲ್ಲ ಎಂದು ಭಾವಿಸಿದ್ದವು' ಎಸ್.ಜೈಶಂಕರ್ ತಿಳಿಸಿದ್ದಾರೆ.
* ಸಚಿವ ಎಸ್.ಜೈಶಂಕರ್ ಅವರು ಜಪಾನ್‌ನ ಮಾಜಿ ಪ್ರಧಾನಿ ದಿವಂಗತ ಶಿಂಜೊ ಅಬೆ ಅವರ ಪತ್ನಿ ಅಕೀ ಅಬೆ ಅವರನ್ನು ಭೇಟಿಯಾಗಿದ್ದು, ಪ್ರಧಾನಿಯವರ ಪತ್ರ ಹಸ್ತಾಂತರಿಸಿದರು. ಭಾರತ- ಜಪಾನ್ ಬಾಂಧವ್ಯ ವೃದ್ಧಿಯಲ್ಲಿ ಶಿಂಜೊ ಅವರ ಕೊಡುಗೆ ಸ್ಮರಿಸಿದರು.
ಶನಿವಾರ, 09 ಮಾರ್ಚ್ 2024
5:10 ಅಪರಾಹ್ನ
Daily PDF
ಭಾರತದ ನಾಯಕತ್ವದಲ್ಲಿ ವಿಶ್ವಾಸವನ್ನು ಮೆರೆದ ದಕ್ಷಿಣ ರಾಷ್ಟ್ರಗಳು
Authored by:
Yallamma G