* ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ನಡೆದ ʼಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ʼ ಸ್ಪರ್ಧೆಯಲ್ಲಿ 'ಮಿಸ್ ಇಂಡಿಯಾʼ ಜೀವಿಕಾ ಬೆಂಕಿ (Jeevika Benki) ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದು, ʼಮಿಸ್ ಬೋಸ್ನಿಯಾʼ ಆಜ್ರಾ ಕ್ಲಾಫಿಜಾ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ 2024 ಕಿರೀಟವನ್ನು ಗೆದ್ದಿದ್ದಾರೆ.
* ಸುಮಾರು 30 ದೇಶಗಳು ಭಾಗವಹಿಸಿದ್ದ ಹಾಗೂ 53 ವರ್ಷಗಳ ಇತಿಹಾಸವಿರುವ ಫೆಸ್ಟಿವಲ್ ಆಫ್ ನೇಶನ್‌ನಲ್ಲಿ 16 ವರ್ಷದ ಜೀವಿಕ ಬೆಂಕಿ ಇಷ್ಟು ದೊಡ್ಡ ಸಾಧನೆ ಮಾಡಿದ ಮೊದಲ ಹೆಮ್ಮೆಯ ಕನ್ನಡತಿಯಾಗಿದ್ದಾರೆ.
* ಜೀವಿಕ ಬೆಂಕಿ ಮೊದಲು ʼಮಿಸ್ ಇಂಡಿಯಾʼ ಸ್ಪರ್ಧೆಯನ್ನು ಗೆದ್ದು ನಂತರ ಒಂದು ರೀತಿಯ ಸಣ್ಣ ಪ್ರಮಾಣದ ʼಮಿಸ್ ಯುನಿವರ್ಸ್ʼ ವಿಶ್ವ ಸುಂದರಿ ಸ್ಪರ್ಧೆಯ ತರಹ ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್‌ನಲ್ಲಿ ಟಾಪ್ ಫೈವ್ ಫೈನಲ್ ಲಿಸ್ಟ್‌ಗೆ ಬಂದು, ಮತ್ತೆ ಕೊನೆ ಹಂತದ ರೋಚಕ ಸ್ಪರ್ಧೆಯಲ್ಲಿ ಅತಿ ಸ್ವಲ್ಪ ಅಂತರದಲ್ಲಿ ಮೊದಲ ಸ್ಥಾನವನ್ನು ತಪ್ಪಿಸಿಕೊಂಡು ಫಸ್ಟ್ ರನ್ನರ್ ಸ್ಥಾನವನ್ನು ಪಡೆದಿದ್ದಾಳೆ.
ಶನಿವಾರ, 02 ನವೆಂಬರ್ 2024
12:46 ಅಪರಾಹ್ನ
Daily PDF
"ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್" ನಲ್ಲಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಗೆದ್ದ ಹೆಮ್ಮೆಯ ಕನ್ನಡತಿ ಜೀವಿಕಾ ಬೆಂಕಿ
Authored by:
Yallamma G