* 2023-2024ನೇ ಹಣಕಾಸುವರ್ಷ ಮಾರ್ಚ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಮೂಲಕ ₹1.78 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ವಾರ್ಷಿಕ ಆಧಾರದ ಮೇಲೆ ಶೇಕಡಾ 11.5 ರಷ್ಟು ಏರಿಕೆಯಾಗಿ.
* ದೇಶೀಯ ವಹಿವಾಟು ಹೆಚ್ಚಳದಿಂದ ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಆರ್ಥಿಕ ವರ್ಷ ಫೆಬ್ರವರಿಯವರೆಗೆ ಒಟ್ಟು 18.40 ಲಕ್ಷ ಕೋಟಿ ರೂ. ವರಮಾನ ಸಂಗ್ರಹವಾಗಿದೆ.
* 34,532 ಕೋಟಿ ರೂ. ಸಿಜಿಎಸ್‌ಟಿ, 43,746 ಕೋಟಿ ರೂ. ಎಸ್‌ಜಿಎಸ್‌ಟಿ, ಆಮದು ವಸ್ತುಗಳ ಮೇಲೆ ಸಂಗ್ರಹಿಸಿದ 40,322 ಕೋಟಿ ರೂ. ಸೇರಿ 87,947 ಕೋಟಿ ರೂ. ಐಜಿಎಸ್‌ಟಿ ಹಾಗೂ 12,259 ಕೋಟಿ ರೂ. ಸೆಸ್ ಸಂಗ್ರಹವಾಗಿದೆ. ಈ ಮೂಲಕ ಒಟ್ಟಾರೆ 2023-24ನೇ ಹಣಕಾಸು ವರ್ಷದಲ್ಲಿ ಈವರೆಗೆ 20.14 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾದಂತಾಗಿದೆ.
ಬುಧವಾರ, 03 ಎಪ್ರಿಲ್ 2024
12:56 ಅಪರಾಹ್ನ
Daily PDF
ಮಾರ್ಚ್ ತಿಂಗಳಿನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ
Authored by:
Yallamma G