* ರಸ್ತೆ ಅಪಘಾತದಲ್ಲಿ ಸಂಭವಿಸುವ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವ ಹಾಗೂ ಕಾನೂನು ಸಂಕೀರ್ಣತೆಯನ್ನು ನಿವಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ರಸ್ತೆ ಅಪಘಾತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಒದಗಿಸುಲು ಕೇಂದ್ರ ಸರ್ಕಾರ ಪೈಲಟ್ ಯೋಜನೆಯೊಂದನ್ನು ಆರಂಭಿಸಲು ಸಿದ್ಧವಾಗಿದೆ.
* ಅಪಘಾತದಲ್ಲಿ ಮಾರಕ ಗಾಯವಾದ ಒಂದು ಗಂಟೆ ಅವಧಿಯನ್ನು 'ಗೋಲ್ದನ್ ಅವರ್' ಎಂದು ಕರೆಯಲಾಗುತ್ತದೆ.
* ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆಶ್ರಯದಲ್ಲಿ ಅಭಿವೃದ್ಧಿ ಪಡಿಸಲಾದ ಪೈಲಟ್ ಯೋಜನೆಗೆ ಚಂಡೀಗಢದಲ್ಲಿ ಚಾಲನೆ ನೀಡಲಾಗುತ್ತದೆ. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ, ಗೋಲ್ಡನ್ ಅವರ್ ಸಹಿತ ಸಕಾಲದಲ್ಲಿ ಚಿಕಿತ್ಸೆ ಒದಗಿಸುವ ವಾತಾವರಣವನ್ನು ಸೃಷ್ಟಿಸುವುದು ಇದರ ಮುಖ್ಯ ಗುರಿಯಾಗಿದೆ.
* ಪ್ರತಿ ಅಪಘಾತ ಸಂತ್ರಸ್ತ ವ್ಯಕ್ತಿಗೆ ಅಪಘಾತ ಸಂಭವಿಸಿದ ದಿನದಿಂದ ಏಳು ದಿನಗಳವರೆಗೆ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಒದಗಿಸುವುದು ಈ ಪೈಲಟ್ ಯೋಜನೆಯ ಉದ್ದೇಶವಾಗಿದೆ.
* ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಈ ಪೈಲಟ್ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದ್ದು, ಪೊಲೀಸರು, ಆಸ್ಪತ್ರೆಗಳು ಮತ್ತು ರಾಜ್ಯ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಇದನ್ನು ಕಾರ್ಯಗತಗೊಳಿಸಲಾಗುತ್ತದೆ.
* ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಇ-ವಿವರವಾದ ಅಪಘಾತ ವರದಿ (ಇಡಿಎಆರ್) ಅಪ್ಲಿಕೇಶನ್ ಮತ್ತು ಎನ್‌ಎಚ್‌ಎಯ ವಹಿವಾಟು ನಿರ್ವಹಣಾ ವ್ಯವಸ್ಥೆ (ಟಿಎಂಎಸ್) ಕಾರ್ಯಗಳನ್ನು ಸಂಯೋಜಿಸುವ ಐಟಿ ಪ್ಲಾಟ್‌ಫಾರ್ಮ್ ಮೂಲಕ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತದೆ.
* ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದ ಹೊಸ ವರದಿಯ ಪ್ರಕಾರ 2022 ರಲ್ಲಿ ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿವೆ, ಇದು 1,68,491 ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು 4,43,366 ಜನರು ಗಾಯಗೊಂಡಿದ್ದಾರೆ.
ಬುಧವಾರ, 03 ಎಪ್ರಿಲ್ 2024
1:48 ಅಪರಾಹ್ನ
Daily PDF
ಪೈಲಟ್ ಯೋಜನೆ : ರಸ್ತೆ ಅಪಘಾತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ
Authored by:
Bhagya R K