* 17 ವರ್ಷದ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ ವಿಶ್ವ ಚೆಸ್‌ ಒಕ್ಕೂಟದ (FIDE) ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾನೆ. ಡಿ ಗುಕೇಶ್ ಅವರು  ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರನಾಗಿದ್ದಾನೆ. ಈ ಮೂಲಕ 40ವರ್ಷದ ಹಿಂದೆ ಗ್ಯಾರಿ ಕ್ಯಾಸ್ಪರೋವ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
* ಭಾರತದ ಚೆಸ್ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ 9/14 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ  5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಕ್ಯಾಂಡಿಡೇಟ್ಸ್ ಗೆದ್ದ ಎರಡನೇ ಭಾರತೀಯ ಎಂಬ ಹಿರಿಮೆಗೆ  ಗುಕೇಶ್ ಅವರು ಪಾತ್ರರಾಗಿದ್ದಾರೆ. 2014 ರಲ್ಲಿ ವಿಶ್ವನಾಥನ್ ಆನಂದ್ ಅವರು ಕ್ಯಾಂಡಿಡೇಟ್ ಚೆಸ್ ಸ್ಪರ್ಧೆಯನ್ನು ಗೆದಿದ್ದರು.
* ವಿಶ್ವ ಚೆಸ್ ಚಾಂಪಿಯನ್ ಆಗುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಗುಕೇಶ್‌ ಈ ವರ್ಷದ ಕೊನೆಯಲ್ಲಿ ಚೀನಾದ ಚೆಸ್‌ ಗ್ರಾಂಡ್‌ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.  
* ಕ್ಯಾಂಡಿಡೇಟ್ ಚೆಸ್ ಟೂರ್ನಿಯ ಓಪನ್ ವಿಭಾಗದ ಅಂತಿಮ ಸ್ಥಾನಗಳು 
- ಪುರುಷರ ವಿಭಾಗದ ಅಂತಿಮ ಸ್ಥಾನಗಳು :
1. ಡಿ.ಗುಕೇಶ್ 
2. ನಕಾಮುರಾ
3. ನಿಪೊಮ್‌ನಿಷಿ
4. ಕರುವಾನ 
5. ಪ್ರಜ್ಞಾನಂದ 
6. ವಿದಿತ್ ಗುಜರಾತಿ 
7. ಅಲಿರೇಝಾ ಫಿರೋಜ್ 
8. ಅಬಸೋವ್

- ಮಹಿಳಾ ವಿಭಾಗದ ಅಂತಿಮ ಸ್ಥಾನಗಳು :
1. ಝಂಗ್‌ಯಿ ತಾನ್
2. ಕೋನೇರು ಹಂಪಿ
3. ಟಿಂಗ್ಲೀ ಲೀ
4. ವೈಶಾಲಿ ಆರ್.
5. ಅಲೆಕ್ಸಾಂಡ್ರಾ ಗೊರ್ಯಾಚೈನಾ
6. ಕ್ಯಾಥೆರಿನಾ ಲಾಗ್ನಿ
7. ಸಲಿಮೋವಾ 
8. ಅನ್ನಾ ಮುಝಿಚುಕ್