* ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ.
* ಕೃಷಿ ಕ್ಷೇತ್ರಕ್ಕೆ ಯಡಿಯೂರಪ್ಪ ಅವರು ನೀಡಿದ ಕೊಡುಗೆ ಅಪಾರ. ಸಿಎಂ ಆಗಿ ಅಧಿಕಾರ ಪಡೆದ ಮೇಲೆ ನೀರಾವರಿ, ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅವರ ಒಟ್ಟಾರೆ ಕೃಷಿ ಸಾಧನೆ ನೋಡಿಕೊಂಡು ಗೌರವ ಡಾಕ್ಟರೇಟ್ ನೀಡುತ್ತಿದ್ದೇವೆ ಎಂದು ತಿಳಿಸಿದರು.
* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಿಂದ ವರ್ಷಕ್ಕೆ ಒಂದೇ ಡಾಕ್ಟರೇಟ್ ನೀಡುವುದಾಗಿ ನಿರ್ಧಾರ ಮಾಡಿ ಕಳೆದ ವರ್ಷ ಮೊದಲ ಡಾಕ್ಟರೇಟ್ ಗೌರವವನ್ನು ಕೋವಾಕ್ಸಿನ್ ಸಂಶೋಧಕ ಕೃಷ್ಣ ಎಲ್ಲಾ ಎಂಬುವವರಿಗೆ ನೀಡಲಾಗಿತ್ತು. ಇದು ಬಿ ಎಸ ಯೆಡಿಯೂರಪ್ಪ ಅವರಿಗೆ ನೀಡುವ ಡಾಕ್ಟರೇಟ್ ಎರಡನೇ ಗೌರವ ಡಾಕ್ಟರೇಟ್ ಎಂದು ಕುಲಪತಿಗಳು ಹೇಳಿದರು.
* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅವರಣದಲ್ಲಿ ಶುಕ್ರವಾರ(ಜುಲೈ21 ) ನಡೆಯಲಿರುವ 8ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ
ಶುಕ್ರವಾರ, 21 ಜುಲೈ 2023
11:46 ಪೂರ್ವಾಹ್ನ
Daily PDF
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಬಿಎಸ್ ಯಡಿಯೂರಪ್ಪಗೆ ಡಾಕ್ಟರೇಟ್
Authored by:
Yallamma G