* ಅಮೂರ್ತ ಸಾಂಸ್ಕತಿಕ ಪರಂಪರೆ ಸಂರಕ್ಷಣೆ ಉದ್ದೇಶಕ್ಕಾಗಿ ಕರ್ನಾಟಕ ಜಾನಪದ ಪರಿಷತ್ ಯುನೆಸ್ಕೋ ಮಾನ್ಯತೆ ಪಡೆದಿದೆ.
* ಯುನೆಸ್ಕೊ ಪಟ್ಟಿಯಲ್ಲಿರುವ ವಿಶ್ವದ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ ಪರಿಷತ್ ಸಹ ಒಂದಾಗಿದೆ ಎಂದು ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
* ಜೂನ್ ತಿಂಗಳಿನಲ್ಲಿ ಯುನೆಸ್ಕೊ ಮುಖ್ಯ ಕಚೇರಿಯಲ್ಲಿ ನಡೆದ ಹತ್ತನೇ ಅಧಿವೇಶನದಲ್ಲಿ ಜಾನಪದ ಪರಿಷತ್‌ಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೊ-2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಆಂತರಿಕ ಸಮಿತಿಗೆ ಸಲಹೆ ನೀಡಲು ಪರಿಷತ್ ಮಾನ್ಯತೆ ಪಡೆದಿದೆ.
* ಯುನೆಸ್ಕೊ ಮಾನ್ಯತೆಯು ನಾಡೋಜ ಎಚ್.ಎಲ್.ನಾಗೇಗೌಡ ಅವರ ಜನಪದ ಕಳಕಳಿಗೆ ಸಿಕ್ಕ ಗೌರವವಾಗಿದೆ. ಕರ್ನಾಟಕದ ಜಾನಪದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಸಂವರ್ಧನೆ, ಪ್ರಸಾರ, ಪ್ರಚಾರ, ದಾಖಲಾತಿ ಮಾಡುವ ಪ್ರಯತ್ನಗಳಿಗೆ ಈ ಮಾನ್ಯತೆ ಸಾಕ್ಷಿಯಾಗಿದೆ.
* 1979ರಲ್ಲಿ ಸ್ಥಾಪನೆಯಾದ ಪರಿಷತ್ 45 ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಅಮೂಲ್ಯ ಕೆಲಸ ಮಾಡಿಕೊಂಡು ಬರುತ್ತಿದೆ. ರಾಮನಗರದಲ್ಲಿ ಸುಮಾರು 15 ಎಕರೆಯಲ್ಲಿ ಪರಿಷತ್ ನಿರ್ಮಿಸಿರುವ 'ಜಾನಪದ ಲೋಕ' ರಾಜ್ಯದಲ್ಲಷ್ಟೇ ಅಲ್ಲದೆ ದೇಶದಲ್ಲೇ ಅಪರೂಪ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.
ಶನಿವಾರ, 28 ಸೆಪ್ಟೆಂಬರ್ 2024
11:45 ಪೂರ್ವಾಹ್ನ
Daily PDF
ಕರ್ನಾಟಕ ಜಾನಪದ ಪರಿಷತ್ ಗೆ ಯುನೆಸ್ಕೊ ಮಾನ್ಯತೆ
Authored by:
Bhagya R K