* ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ (ಎಲ್‌ಡಿಪಿ) ನಾಯಕನ ಸ್ಥಾನಕ್ಕೆ ಶುಕ್ರವಾರ(ಸೆ.27) ನಡೆದ ಚುನಾವಣೆಯಲ್ಲಿ ಜಪಾನ್‌ನ ಹಿರಿಯ ರಾಜಕಾರಣಿ ಹಾಗೂ ಮಾಜಿ ರಕ್ಷಣಾ ಸಚಿವ ಶಿಗೇರು ಇಶಿಬಾ ಅವರು ಚುನಾಯಿತರಾಗಿದ್ದಾರೆ. ಈ ಮೂಲಕ ಶಿಗೇರು ಇಶಿಬಾ ಅವರು ಜಪಾನ್‌ನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.
* ಅಕ್ಟೋಬರ್ 01 ರಂದು ಇಶಿಬಾ ಜಪಾನ್‌ನ 102 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ, ಅದೇ ದಿನ ಫ್ಯೂಮಿಯೊ ಕಿಶಿಡಾ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.
* 67 ವರ್ಷದ ಇಶಿಬಾ ಅವರು ಚುನಾವಣೆಯಲ್ಲಿ ತಮ್ಮ ಪರವಾಗಿ 215 ಮತಗಳನ್ನು ಪಡೆದರು. ಇಶಿಬಾ ಅವರ ಪ್ರತಿಸ್ಪರ್ಧಿ, ಜಪಾನ್‌ನ ಮೊದಲ ಮಹಿಳಾ ನಾಯಕಿಯಾಗಲು ಸ್ಪರ್ಧಿಸುತ್ತಿದ್ದ ಆರ್ಥಿಕ ಭದ್ರತಾ ಸಚಿವೆ ಸಾನೆ ತಕೈಚಿ ಅವರು 194 ಮತಗಳನ್ನು ಪಡೆದು ಸೋಲುಂಡರು.
* ಪ್ರಸ್ತುತ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಸಂಸತ್ತಿನ ಅನುಮೋದನೆಯ ನಂತರ, ಹೊಸ ನಾಯಕ ಹೊಸ ಸಚಿವ ಸಂಪುಟವನ್ನು ರಚಿಸುತ್ತಾರೆ. ಕೆಳಮನೆಯ ಪ್ರಸ್ತುತ ಅಧಿಕಾರಾವಧಿಯು ಅಕ್ಟೋಬರ್ 2025 ರವರೆಗೆ ಇರುತ್ತದೆ.
ಜಪಾನ್‌ನ ನೂತನ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ
Published by Yallamma G
28 ಸೆಪ್ಟೆಂಬರ್ 2024