* ಕರ್ನಾಟಕ ರಾಜ್ಯ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಮತ್ತು ಅಂತಾರಾಷ್ಟ್ರೀಯ ಹಾಕಿ ಕೋಚ್ ರಾದ 61 ವರ್ಷ ವಯಸ್ಸಿನ ಖಾಲೀದ್ ಎಂ ಮೋದಿ ಅವರು ನಿಧನರಾದರು.
* 1980 ಮತ್ತು 90ರ ದಶಕದಲ್ಲಿ ತಮ್ಮ ಗೋಲ್‌ಕೀಪಿಂಗ್ ಚಾಕಚಾಕ್ಯತೆಯ ಮೂಲಕ ಹೆಸರಾಗಿದ್ದ ಖಾಲೀದ್ ಅವರಿಗೆ ವಿಶ್ವಕಪ್ ಮತ್ತು ಒಲಿಂಪಿಕ್ ಟೂರ್ನಿಗಳಲ್ಲಿ ಅಡುವ ಭಾರತ ತಂಡಗಳಲ್ಲಿ ಹಲವು ಅವಕಾಶಗಳು ತಪ್ಪಿದ್ದವು. ಖಾಲೀದ್ ಕರ್ನಾಟಕ ಮತ್ತು ಕೆನರಾ ಬ್ಯಾಂಕ್ ತಂಡದ ಗೋಲ್‌ಕೀಪರ್ ಆಗಿದ್ದರು.
* 1983ರಲ್ಲಿ ಕೆನ್ಯಾ ಪ್ರವಾನ ಮಾಡಿದ್ದ ಭಾರತ ಜೂನಿಯರ್ ಹಾಕಿ ತಂಡದಲ್ಲಿ ನಾನು ಮತ್ತು ಖಾಲೀದ್ ಜೊತೆಗೆ ಇದ್ದೆವು. ಆ ಟೂರ್ನಿಯಲ್ಲಿ ಅವರು ಅದ್ಭುತವಾಗಿ ಕೀಪಿಂಗ್ ಮಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಅವರು ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವರು ಎಂಬ ಭರವನೆ ನಮ್ಮೆಲ್ಲರಲ್ಲೂ ಮೂಡಿತ್ತು' ಎಂದು ಒಲಿಂಪಿಯನ್ ಹಾಕಿ ಆಟಗಾರ ಜೂಡ್ ಫೆಲಿಕ್ಸ್ ಅವರು ನೆನಪಿಸಿಕೊಂಡರು.
ಗುರುವಾರ, 07 ಡಿಸೆಂಬರ್ 2023
3:20 ಅಪರಾಹ್ನ
Daily PDF
ಕರ್ನಾಟಕ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಖಾಲೀದ್ ನಿಧನ
Authored by:
Bhagya R K