* ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ಇದೀಗ ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆದ್ದಾರೆ.
* ಡಿಸೆಂಬರ್ 06 ರಂದು ನಡೆದ ಐಸಿಸಿ ನೂತನ ಶ್ರೇಯಾಂಕಪಟ್ಟಿ ಪ್ರಕಟಿಸಿದ್ದು, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಹಿಂದಿಕ್ಕಿರುವ ಬಿಷ್ಣೋಯ್ ಮೊದಲ ಸ್ಥಾನಕ್ಕೆ ಪಡೆದುಕೊಂಡಿದ್ದಾರೆ.
* ಇತ್ತೀಚೆಗಷ್ಟೇ ಆಸೀಸ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಭಾರತವು 4-1 ಅಂತರದಿಂದ ಗೆದ್ದಿದ್ದು, ಇದರಲ್ಲಿ ರವಿ ಬಿಷ್ಟೊಯ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗಳಿಸಿದ್ದರು. 23ರ ಹರೆಯದ ಬಿಪ್ಲೋಯ್ 5 ಪಂದ್ಯಗಳಿಂದ ಸರಣಿಯಲ್ಲಿ 9 ವಿಕೆಟ್ ಪಡೆದಿದ್ದಾರೆ.
* 699 ರೇಟಿಂಗ್ ಪಾಯಿಂಟ್ಸ್ ಪಡೆದ ಬಿಷ್ಟೊಯ್ ಅವರು ಅಫ್ಘಾನಿಸ್ತಾನದ ರಶೀದ್ ಖಾನ್ (692) ರನ್ನು ಹಿಂದಿಕ್ಕಿ ಅಗ್ರ ಸ್ಥಾನಕೇರಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ವಣಿಂದು ಹಸರಂಗ ಮತ್ತು ಇಂಗ್ಲೆಂಡ್‌ನ ಅದಿಲ್ ರಶೀದ್ ಇಬ್ಬರೂ 679 ಅಂಕಗಳೊಂದಿಗೆ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
* ಶ್ರೀಲಂಕಾದ ಮಹೀಷ ತೀಕ್ಷಣ (677) ಅವರು ಅಗ್ರ ಐದು ಬೌಲರ್‌ಗಳ ಪಟ್ಟಿಯಲ್ಲಿದ್ದು, ಟಾಪ್ 10 ಪಟ್ಟಿಯಲ್ಲಿರುವ ಏಕೈಕ ಭಾರತೀಯ ರವಿ ಬಿಷ್ಟೊಯ್. ಅಕ್ಷರ್ ಪಟೇಲ್ ಅವರು 9 ಸ್ಥಾನ ಮೇಲಕ್ಕೇರಿ 18ನೇ ಸ್ಥಾನದಲ್ಲಿದ್ದಾರೆ.
* ಆಸೀಸ್ ವಿರುದ್ಧ 4-1 ಅಂತರದ ಸರಣಿ ವಿಜಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಭಾರತದ ಆರಂಭಿಕ ಆಟಗಾರ ಋತುರಾಜ್ ಗಾಯಕವಾಡ ಒಂದು ಸ್ಥಾನ ಕುಸಿತ ಕಂಡು 7ನೇ ಸ್ಥಾನದಲ್ಲಿದ್ದಾರೆ.
ಗುರುವಾರ, 07 ಡಿಸೆಂಬರ್ 2023
3:38 ಅಪರಾಹ್ನ
Daily PDF
ಐಸಿಸಿ ಟಿ 20 ರ್ಯಾಂಕಿಂಗ್ : ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ ರವಿ ಬಿಷ್ಣೋಯ್
Authored by:
Bhagya R K