➤ ವಿಮಾನದಲ್ಲಿದ್ದ 174 ಪ್ರಯಾಣಿಕರ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಅಸಾಮಾನ್ಯ ಸಾಹಸ ಮೆರೆದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಅವರಿಗೆ ಇಸ್ರೇಲ್ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಶೌರ್ಯ ಪುರಸ್ಕಾರವಾದ 'ಪ್ರೆಸಿಡೆನ್ಷಿಯಲ್ ಅವಾರ್ಡ್ ಫಾರ್ ಸಿವಿಲಿಯನ್ ಹೀರೋಯಿಸಂ' (Presidential Award for Civilian Heroism) ನೀಡಿ ಗೌರವಿಸುವುದಾಗಿ ಘೋಷಿಸಿದೆ.
➤ 2026ರ ಸೆಪ್ಟೆಂಬರ್ 30ರಂದು ಯುಎಇ ಮೂಲದ 'ಫ್ಲೈದುಬೈ' (Flydubai) ಸಂಸ್ಥೆಯ FZ1073 ವಿಮಾನವು ದುಬೈನಿಂದ ಟೆಲ್ ಅವಿವ್‌ಗೆ (ಇಸ್ರೇಲ್) ಪ್ರಯಾಣಿಸುತ್ತಿತ್ತು. ವಿಮಾನವು ಆಕಾಶಮಾರ್ಗದಲ್ಲಿ ಸಾಗುತ್ತಿದ್ದಾಗ, ಸಹ-ಪೈಲಟ್ (Co-pilot - ಒಮಾನ್ ಮೂಲದ ಹಮ್ಮಾಮ್ ಅಲ್-ಹಮ್ಮಾಮಿ) ವಿಮಾನವನ್ನು ಹೈಜಾಕ್ ಮಾಡಿ ಟೆಲ್ ಅವಿವ್‌ನ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಸಂಚು ರೂಪಿಸಿದ್ದನು. ಸಹ-ಪೈಲಟ್ ಇದ್ದಕ್ಕಿದ್ದಂತೆ ತುರ್ತು ಕೊಡಲಿಯಿಂದ (Crash Axe) ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಭೀಕರವಾಗಿ ದಾಳಿ ನಡೆಸಿದನು. ತೀವ್ರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕರು ಹಾಗೂ ಆಫ್-ಡ್ಯೂಟಿ ಸಿಬ್ಬಂದಿ ಒಳನುಗ್ಗಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ನಂತರ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ (Emergency Landing) ಮಾಡಿಸಲಾಯಿತು>
➤  ಇಸ್ರೇಲ್ ಅಧ್ಯಕ್ಷರ ಘೋಷಣೆ: ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ (Isaac Herzog) ಅವರು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಮಯಪ್ರಜ್ಞೆ ಮತ್ತು ಶೌರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ಮಿತ್ ಅವರು ಚೇತರಿಸಿಕೊಂಡ ನಂತರ ಇಸ್ರೇಲ್‌ಗೆ ಆಹ್ವಾನಿಸಿ, ವೈಯಕ್ತಿಕವಾಗಿ 'ಅಧ್ಯಕ್ಷೀಯ ಶೌರ್ಯ ಪ್ರಶಸ್ತಿ' ಪ್ರಧಾನ ಮಾಡುವುದಾಗಿ ತಿಳಿಸಿದ್ದಾರೆ.
ಈ ಘಟನೆಯಲ್ಲಿ ದಾಳಿಕೋರನನ್ನು ತಡೆಯಲು ಸಹಕರಿಸಿದ ಆರೋ ಇಸ್ರೇಲಿ ಪ್ರಯಾಣಿಕರಿಗೂ (ತಾಲಿ ಮನೆಸ್, ಜ್ವಿಕಾ ಮನೆಸ್, ಯಾನಿವ್ ಹಯೂನ್, ಡಾ. ಶೋಟಾ ಮುಸಾಯೇವ್, ಅಸಾಫ್ ರಾಜುವಾನ್, ಮತ್ತು ಓರ್ ಪಾರ್ದಿಲೋವ್) ಈ ಪ್ರಶಸ್ತಿಯನ್ನು ನೀಡಲಾಗಿದೆ.
➤ ಪ್ರಮುಖ ಜಾಗತಿಕ ಮುಖಂಡರ ಶ್ಲಾಘನೆ: ಕ್ಯಾಪ್ಟನ್ ಸ್ಮಿತ್ ಅವರ ಈ ಸಾಹಸವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಜಾಗತಿಕ ನಾಯಕರು ಕೊಂಡಾಡಿದ್ದಾರೆ. ಅಲ್ಲದೆ, ಯುಎಸ್ ಕಾಂಗ್ರೆಸ್‌ನ ಪ್ರತಿನಿಧಿ ರಾಜಾ ಕೃಷ್ಣಮೂರ್ತಿ ಅವರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಅಧಿಕೃತ 'ಕಾಂಗ್ರೆಷನಲ್ ರೆಕಾರ್ಡ್'ನಲ್ಲಿ ಕ್ಯಾಪ್ಟನ್ ಸ್ಮಿತ್ ಅವರ ಗೌರವಾರ್ಥ ಶ್ಲಾಘನಾ ಟಿಪ್ಪಣಿಯನ್ನು ಸಿದ್ಧಪಡಿಸುತ್ತಿದ್ದಾರೆ.