* ವಿಶ್ವ ಆರೋಗ್ಯ ಸಂಸ್ಥೆ (WHO) ಕೀನ್ಯಾವನ್ನು ಮಾನವ ಆಫ್ರಿಕನ್ ಟ್ರಿಪನೋಸೋಮಿಯಾಸಿಸ್ (ಸ್ಲೀಪಿಂಗ್ ಸಿಕ್ನೆಸ್-ನಿದ್ರಾಹೀನತೆ) ರೋಗವನ್ನು ಸಾರ್ವಜನಿಕ ಆರೋಗ್ಯ ಸವಾಲಾಗಿ ತೊಡೆದುಹಾಕಿದ 10ನೇ ದೇಶವೆಂದು ಘೋಷಿಸಿದೆ.
* ನೈರೋಬಿಯಲ್ಲಿ WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೀನ್ಯಾ ಸರ್ಕಾರ ಮತ್ತು ಜನರನ್ನು ಅಭಿನಂದಿಸಿದರು.
* 2018ರಲ್ಲಿ ಗಿನಿ ವರ್ಮ್ ರೋಗದಿಂದ ಮುಕ್ತಗೊಂಡ ನಂತರ, ಇದು ಕೀನ್ಯಾದಲ್ಲಿ ತೊಡೆದುಹಾಕಲಾದ ಎರಡನೇ ನಿರ್ಲಕ್ಷಿತ ಉಷ್ಣವಲಯದ ರೋಗವಾಗಿದೆ.
* ಸ್ಲೀಪಿಂಗ್ ಸಿಕ್ನೆಸ್ ಸೋಂಕಿತ ಟ್ಸೆಟ್ಸೆ ನೊಣಗಳಿಂದ ಹರಡುವ ಪ್ರೊಟೊಜೋವನ್ ಪರಾವಲಂಬಿಗಳಿಂದ ಉಂಟಾಗುತ್ತದೆ.
* ಈ ರೋಗದ ಆರಂಭಿಕ ಲಕ್ಷಣಗಳಲ್ಲಿ ಜ್ವರ, ತಲೆನೋವು, ಕೀಲು ನೋವು ಸೇರಿವೆ. ಮುಂದಿನ ಹಂತಗಳಲ್ಲಿ ಗೊಂದಲ, ನಿದ್ರಾ ವ್ಯತ್ಯಯ ಮತ್ತು ನಡವಳಿಕೆಯ ಬದಲಾವಣೆಗಳಂತಹ ನರವೈಜ್ಞಾನಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಕೀನ್ಯಾ ದೇಶದಿಂದ ನಿದ್ರಾಹೀನತೆ(Sleeping Sickness) ರೋಗ ನಿರ್ಮೂಲನೆ
Published by Jyoti Angadi
13 ಆಗಸ್ಟ್ 2025