* ಹುರುನ್ ವರದಿ ಪ್ರಕಾರ, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬದ ಆಸ್ತಿ 28 ಲಕ್ಷ ಕೋಟಿ ರೂ. ತಲುಪಿದ್ದು, ಇದು ಅದಾನಿ ಕುಟುಂಬದ (14.01 ಲಕ್ಷ ಕೋಟಿ) ಸಂಪತ್ತಿಗಿಂತ ಎರಡು ಪಟ್ಟು ಹೆಚ್ಚಾಗಿದೆ.
* ಭಾರತದ 300 ಶ್ರೀಮಂತ ಕುಟುಂಬಗಳ ಒಟ್ಟು ಆಸ್ತಿ 140 ಲಕ್ಷ ಕೋಟಿಗೂ ಹೆಚ್ಚು, ಇದು ದೇಶದ ಜಿಡಿಪಿಗಿಂತ 40% ಹೆಚ್ಚು. ಅಂಬಾನಿ ಕುಟುಂಬದ ಆಸ್ತಿಯೇ ಜಿಡಿಪಿಯ 12% ಇದೆ.
* ಕಳೆದ ವರ್ಷ ಅಂಬಾನಿ ಕುಟುಂಬದ ಆಸ್ತಿ 10% ಹೆಚ್ಚಳ ಕಂಡಿದೆ. ಕುಮಾರ್ ಮಂಗಳಂ ಬಿರ್ಲಾ ಕುಟುಂಬದ ಆಸ್ತಿ 20% ಏರಿ 6.47 ಲಕ್ಷ ಕೋಟಿಗೆ, ಜಿಂದಾಲ್ ಕುಟುಂಬದ ಆಸ್ತಿ 21% ಏರಿ 5.70 ಲಕ್ಷ ಕೋಟಿಗೆ ತಲುಪಿದೆ. ಬಜಾಜ್ ಕುಟುಂಬದ ಆಸ್ತಿ ಮಾತ್ರ 21% ಕುಸಿದು 5.6 ಲಕ್ಷ ಕೋಟಿಗಿಳಿದಿದೆ.
* ಬೆಂಗಳೂರು ನಗರದಲ್ಲಿ ಭಾರತದ 300 ಶ್ರೀಮಂತ ಕುಟುಂಬಗಳಲ್ಲಿ 10 ಕುಟುಂಬಗಳು ವಾಸಿಸುತ್ತಿವೆ. ಇವುಗಳಲ್ಲಿ ವಿಪ್ರೋ ಮಾಲೀಕತ್ವದ ಪ್ರೇಂಜಿ ಕುಟುಂಬವು ನಗರದ ಶ್ರೀಮಂತ ಕುಟುಂಬವಾಗಿದ್ದು, ದೇಶದ 8ನೇ ಸ್ಥಾನದಲ್ಲಿದೆ. ಇವರ ಆಸ್ತಿ ಮೌಲ್ಯ 2.27 ಲಕ್ಷ ಕೋಟಿ ರೂ. ಆಗಿದೆ.
ಅಂಬಾನಿ ಕುಟುಂಬದ ಆಸ್ತಿ 28 ಲಕ್ಷ ಕೋಟಿ : ಅದಾನಿಗಿಂತ ಎರಡು ಪಟ್ಟು ಹೆಚ್ಚು
Published by Jyoti Angadi
13 ಆಗಸ್ಟ್ 2025