* ದೇಶದಾದ್ಯಂತ ಆಗಸ್ಟ್ 15 ರಿಂದ ಎಲ್ಲಾ ಪಂಚಾಯತ್ ಗಳ ಅಭಿವೃದ್ಧಿ ಕಾರ್ಯಗಳು ಮತ್ತು ಆದಾಯ ಸಂಗ್ರಹಣೆಗೆ ಕಡ್ಡಾಯವಾಗಿ ಡಿಜಿಟಲ್ ಪಾವತಿ ಬಳಸಲಿದ್ದು, ಯುಪಿಐ ಪಾವತಿಗೆ ಶಕ್ತ ಎಂದು ಘೋಷಿಸಲಾಗುವುದು ಎಂದು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ.
* ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಸಚಿವಾಲಯ ಮುಖ್ಯಮಂತ್ರಿ, ಸಂಸದರು ಮತ್ತು ಶಾಸಕರಂತಹ ಗಣ್ಯರ ಸಮ್ಮುಖದಲ್ಲಿ ಯುಪಿಐ ಪಾವತಿ ಅನುಕೂಲವಿರುವ ಪಂಚಾಯತ್ ಗಳಂದು ಘೋಷಿಸಬೇಕು ಮತ್ತು ಅವುಗಳನ್ನು ಉದ್ಘಾಟಿಸಬೇಕು ಎಂದು ಸಚಿವಾಲಯ ತಿಳಿಸಿದೆ.
* ಯುಪಿಐ ಆಧಾರಿತ ಪಾವತಿಗಳನ್ನುಶೇ. 98 ರಷ್ಟು ಪಂಚಾಯತ್ ಗಳು ಬಳಸಲು ಪ್ರಾರಂಭಿಸಲಾಗಿದ್ದು, ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಂಎಫ್ ಎಸ್) ಮೂಲಕ ಸುಮಾರು 1.5 ಲಕ್ಷ ಕೋಟಿ ರೂ. ಪಾವತಿ ಮಾಡಲಾಗಿದೆ.
* ಚೆಕ್ ಮತ್ತು ನಗದು ಪಾವತಿಯನ್ನು ಬಹುತೇಕ ನಿಲ್ಲಿಸಲಾಗಿದೆ ಎಂದು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ಶುಕ್ರವಾರ, 30 ಜೂನ್ 2023
1:33 ಅಪರಾಹ್ನ
Daily PDF
ಕೇಂದ್ರ ಸರ್ಕಾರ : ಅಗಸ್ಟ 15 ರಿಂದ ಎಲ್ಲ ಪಂಚಾಯಿತಿಗಳಲ್ಲಿ ಡಿಜಿಟಲ್ ಪಾವತಿ ಕಡ್ಡಾಯ
Authored by:
Yallamma G