* ವರ್ಲ್ಡ್ ಅಸೋಸಿಯೇಷನ್ ಆಫ್ ನ್ಯೂತ ಪಬ್ಲಿಷರ್ಸ್ ಕೊಡಮಾಡುವ ಪ್ರಸಕ್ತ ಸಾಲಿನ ವಾರ್ಷಿಕ 'ಗೋಲ್ಡನ್ ಪೆನ್ ಆಫ್ ಫ್ರೀಡಂ' ಪ್ರಶಸ್ತಿಗೆ ಇರಾನ್ ಪತ್ರಕರ್ತೆಯರಾದ ಇಲಾಹೆ ಮೊಹಮ್ಮದಿ ಮತ್ತು ನಿಲೋಫರ್ ಹಮೇದಿ ಭಾಜನರಾಗಿದ್ದಾರೆ.
* ತೈವಾನ್‌ನ ತೈಪೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಇಬ್ಬರೂ ಪತ್ರಕರ್ತೆಯರು ಈಗ ಜೈಲಿನಲ್ಲಿದ್ದು, ಪತ್ರಿಕಾ ಸ್ವಾತಂತ್ರ್ಯ ಪ್ರತಿಪಾದನೆ ಮತ್ತು ರಕ್ಷಣೆಯಲ್ಲಿ ಮಹತ್ತರ ಪಾತ್ರ ನಿಭಾಯಿಸುತ್ತಿರುವ ಪತ್ರಕರ್ತರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ.
* ವಿಶ್ವ ಸಂಪಾದಕರ ವೇದಿಕೆಯ ಅಧ್ಯಕ್ಷೆ ಮಾರ್ಥಾ ರಾಮೋಸ್ ಅವರು ಜೂನ್ 27 (ಬುಧವಾರ)ರಂದು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಪ್ರಶಸ್ತಿಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಅವರು "ಒಮ್ಮೆ ಮತ್ತು ಎಲ್ಲರಿಗೂ ಪತ್ರಿಕಾ ಮುಕ್ತವಾಗಿರಲಿ" ಎಂದು ತಿಳಿಸಿದ್ದರು.
ಶುಕ್ರವಾರ, 30 ಜೂನ್ 2023
1:22 ಅಪರಾಹ್ನ
Daily PDF
ಇರಾನ್ ಮೂಲದ ಇಬ್ಬರು ಪತ್ರಕರ್ತೆಯರಿಗೆ 'ಗೋಲ್ಡನ್ ಪೆನ್ ಆಫ್ ಫ್ರೀಡಂ' ಪ್ರಶಸ್ತಿಯ ಗರಿ
Authored by:
Akshata Halli