* ಕುದುರಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್) ಅಧ್ಯಕ್ಷ ಹಾಗೂ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿ ಗಂಟಿ ವೆಂಕಟ್ ಕಿರಣ್ ಅವರನ್ನು ನೇಮಕ ಮಾಡಲಾಗಿದೆ. ವೆಂಕಟ್ ಕಿರಣ್ ಅವರು ಉಕ್ಕಿನ ಕ್ಷೇತ್ರದಲ್ಲಿ 34 ವರ್ಷಗಳ ವೃತ್ತಿ ಅನುಭವವನ್ನು ಹೊಂದಿದ್ದಾರೆ.
* ಜಿ.ವಿ.ಕಿರಣ್ ಅವರು ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿಯಿಂದ ಮೆಕಾನಿಕಲ್ ಆಫ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮತ್ತು ಬಿಐಟಿಎಸ್ ಪಿಲಾನಿಯಿಂದ ಗುಣಮಟ್ಟ ನಿರ್ವಹಣೆಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.
* ಒಡಿಶಾದ ಬಿಆರ್ ಪಿಎಲ್ ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ಅವರು ಎಸ್ಸಾರ್ ಸ್ಟೀಲ್ ಲಿಮಿಟೆಡ್‌ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವನ್ನು ಹೊಂದಿದ್ದಾರೆ.
* ಜಿ.ವಿ.ಕಿರಣ್ 2019ರಲ್ಲಿ ಕೆಐಒಸಿಎಲ್ ಲಿಮಿಟೆಡ್‌ಗೆ ಜನರಲ್ ಮ್ಯಾನೇಜರ್ (ಪ್ರಾಜೆಕ್ಟ್‌ಗಳು ಮತ್ತು ತಾಂತ್ರಿಕ ಸೇವೆಗಳು) ಆಗಿ ಸೇರಿದರು. ನಂತರ ಅವರು ಕೆಐಒಸಿಎಲ್ ಲಿಮಿಟೆಡ್ ನ ನಿರ್ದೇಶಕರಾದರು. ಕೆಐಒಸಿಎಲ್ ಲಿಮಿಟೆಡ್‌ನ ಸಿಎಂಡಿ ಆಗಿ ಅವರು ತಮ್ಮ ಹೊಸ ಪಾತ್ರವನ್ನು ಪ್ರಾರಂಭಿಸಿದ್ದಾರೆ.
ಸೋಮವಾರ, 03 ಜೂನ್ 2024
12:22 ಅಪರಾಹ್ನ
Daily PDF
ಕೆಐಒಸಿಎಲ್ ಗೆ ಅಧ್ಯಕ್ಷ ಹಾಗೂ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿ ಜಿ.ವಿ.ಕಿರಣ್ ನೇಮಕ
Authored by:
Yallamma G