* ಭಾರತೀಯ ಸೇನೆಯು ಜುಲೈ 26, 1999 ರಂದು ಪಾಕಿಸ್ತಾನವನ್ನು ಸೋಲಿಸಿತ್ತು, ಅಂದಿನಿಂದ ಭಾರತೀಯ ಸಶಸ್ತ್ರ ಪಡೆಗಳ ಹೆಮ್ಮೆ ಮತ್ತು ಧೈರ್ಯವನ್ನು ಸ್ಮರಿಸುವುದಕ್ಕಾಗಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.
* ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ.
* ಕಾರ್ಗಿಲ್ ಯುದ್ಧವು 1999 ರ ಮೇ-ಜೂನ್ ನಡುವೆ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹೋರಾಡಲ್ಪಟ್ಟಿತು, ಇದರಲ್ಲಿ ಭಾರತವು ವಿಜಯವನ್ನು ಪಡೆಯಿತು. ಆದ್ದರಿಂದ, ಈ ದಿನವನ್ನು ಭಾರತೀಯ ಸೈನಿಕರ ವಿಜಯಕ್ಕಾಗಿ ಸಮರ್ಪಿಸಲಾಗಿದೆ.