➤ ಭಾರತೀಯ ಕರಾವಳಿ ಕಾವಲು ಪಡೆ (ICG) ಮತ್ತು ವಿಯೆಟ್ನಾಂ ಕರಾವಳಿ ಕಾವಲು ಪಡೆ (VCG) ನಡುವೆ ದ್ವಿಪಕ್ಷೀಯ ಕಡಲ ಭದ್ರತಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 'ಸಹಯೋಗ್-ಹೊಪ್‌ಟ್ಯಾಕ್ 2026' (Sahyog HOP TAC) ಜಂಟಿ ಕಸರತ್ತು ಚೆನ್ನೈ ಕರಾವಳಿಯಲ್ಲಿ ಆರಂಭವಾಗಿದೆ.

  • ವಿಯೆಟ್ನಾಂ ಹಡಗು: ವಿಯೆಟ್ನಾಂ ಕರಾವಳಿ ಕಾವಲು ಪಡೆಯ CSB 8002 ಹಡಗು ಮತ್ತು 6 ಸದಸ್ಯರ ನಿಯೋಗ ಭಾಗವಹಿಸಿದೆ.
  • 7ನೇ ಉನ್ನತ ಮಟ್ಟದ ಸಭೆ (7th High-Level Meeting): ಜಂಟಿ ಅಭ್ಯಾಸಕ್ಕೂ ಮುನ್ನ ಚೆನ್ನೈನಲ್ಲಿ ಉಭಯ ಪಡೆಗಳ 7ನೇ ಉನ್ನತ ಮಟ್ಟದ ಸಭೆ ನಡೆಯಿತು.
    • ಸಹ-ಅಧ್ಯಕ್ಷತೆ: ಭಾರತೀಯ ಕರಾವಳಿ ಕಾವಲು ಪಡೆಯ ಮಹಾನಿರ್ದೇಶಕ ಪರಮೇಶ್ ಶಿವಮಣಿ ಮತ್ತು ವಿಯೆಟ್ನಾಂ ಕರಾವಳಿ ಕಾವಲು ಪಡೆಯ ಉಪ ಕಮಾಂಡೆಂಟ್ ಮೇಜರ್ ಜನರಲ್ ಲುವೊಂಗ್ ದಿನ್ ಹುಂಗ್.

ಸಮರಾಭ್ಯಾಸದ ಮುಖ್ಯ ಉದ್ದೇಶಗಳು:

  • ಕಾರ್ಯಾಚರಣೆಯ ಸಮನ್ವಯತೆ (Operational Interoperability): ಎರಡೂ ಕರಾವಳಿ ಕಾವಲು ಪಡೆಗಳ ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ಒಟ್ಟಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ವೃದ್ಧಿಸುವುದು.
  • ಸಮುದ್ರ ಮಾಲಿನ್ಯ ತಡೆ (Marine Pollution Response): ಸಮುದ್ರದಲ್ಲಿ ಸಂಭವಿಸುವ ತೈಲ ಸೋರಿಕೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಜಂಟಿ ತಂತ್ರಜ್ಞಾನ ವಿನಿಮಯ.
  • ಕಡಲ ಕಾನೂನು ಜಾರಿ (Maritime Law Enforcement): ಕಡಲ್ಗಳ್ಳತನ (Piracy) ತಡೆ, ಅಕ್ರಮ ರವಾನೆ ತಡೆ ಮತ್ತು ಕಡಲ ಗಡಿ ರಕ್ಷಣೆ.
  • ಹುಡುಕಾಟ ಮತ್ತು ರಕ್ಷಣೆ (Search and Rescue - SAR): ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಹಡಗುಗಳು ಮತ್ತು ಮೀನುಗಾರರನ್ನು ರಕ್ಷಿಸುವ ಕೌಶಲ್ಯ ಹಂಚಿಕೆ.