Job Description: ➤ ಹಿಂದೂ ಮಹಾಸಾಗರ ಪ್ರದೇಶದಲ್ಲಿ (Indian Ocean Region) ಸುಸ್ಥಿರ ಸಮುದ್ರ ಸಂಪನ್ಮೂಲ ನಿರ್ವಹಣೆ, ಜಲಕೃಷಿ, ವೈಜ್ಞಾನಿಕ ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನ ವಲಯಗಳಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಲು ಭಾರತ ಮತ್ತು ಸೀಶೆಲ್ಸ್ (India & Seychelles) ದೇಶಗಳು ಮಹತ್ವದ ದ್ವಿಪಕ್ಷೀಯ ಒಪ್ಪಂದಕ್ಕೆ ಬಂದಿವೆ.➤ ನವದೆಹಲಿಯಲ್ಲಿ ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹಾಲಿನ ಉತ್ಪಾದನೆ ಸಚಿವಾಲಯದ (Ministry of Fisheries, Animal Husbandry and Dairying) ಅಡಿಯಲ್ಲಿರುವ ಮೀನುಗಾರಿಕೆ ಇಲಾಖೆಯು ಸೀಶೆಲ್ಸ್ ಸರ್ಕಾರದೊಂದಿಗೆ ಈ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿತ್ತು. ಸೀಶೆಲ್ಸ್ ನಿಯೋಗದ ನೇತೃತ್ವ: ಮೀನುಗಾರಿಕೆ, ಕೃಷಿ ಮತ್ತು ನೀಲಿ ಆರ್ಥಿಕತೆ ಸಚಿವರಾದ ವಲ್ವೇಸ್ ಕಾಸ್ಕೊ (Wallace Cosgrow). ಭಾರತೀಯ ನಿಯೋಗದ ನೇತೃತ್ವ: ಕೇಂದ್ರ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ. ಅಭಿಲಕ್ಷ ಲಿಖಿ (Dr. Abhilaksh Likhi). ➤ ಒಪ್ಪಂದದ ಮುಖ್ಯ ಉದ್ದೇಶಗಳು ಮತ್ತು ಸಹಕಾರ ಕ್ಷೇತ್ರಗಳು: ಉಭಯ ದೇಶಗಳ ನಡುವಿನ ಈ ಒಪ್ಪಂದವು ಪ್ರಮುಖವಾಗಿ ಹಿಂದೂ ಮಹಾಸಾಗರದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ: ಸುಸ್ಥಿರ ಮೀನುಗಾರಿಕೆ (Sustainable Fisheries): ಅತಿಯಾದ ಮೀನುಗಾರಿಕೆಯನ್ನು ತಡೆದು, ಸಮುದ್ರ ಜೀವಿಗಳ ಉಳಿವಿಗಾಗಿ ಪರಿಸರಸ್ನೇಹಿ ಮೀನುಗಾರಿಕೆ ವಿಧಾನಗಳನ್ನು ಅಳವಡಿಸಿಕೊಳ್ಳುವುದು. ಜಲಕೃಷಿ ಮತ್ತು ತಂತ್ರಜ್ಞಾನ (Aquaculture & Tech): ಜಲಕೃಷಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಆಧಾರಿತ ಸಮುದ್ರ ಸಂಪನ್ಮೂಲ ಸಮೀಕ್ಷೆ ಹಾಗೂ ಕರಾವಳಿ ನಿರ್ವಹಣೆಯಲ್ಲಿ ಜಂಟಿ ಸಂಶೋಧನೆ. ನೀಲಿ ಆರ್ಥಿಕತೆಗೆ (Blue Economy) ಉತ್ತೇಜನ: ಸಮುದ್ರ ಸಂಪನ್ಮೂಲಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಬಳಸಿ ಆರ್ಥಿಕ ಪ್ರಗತಿ ಸಾಧಿಸುವುದು. ಸಾಮರ್ಥ್ಯ ವೃದ್ಧಿ (Capacity Building): ಎರಡೂ ದೇಶಗಳ ನಡುವೆ ತಜ್ಞರು, ಸಂಶೋಧಕರು ಮತ್ತು ಮೀನುಗಾರರ ತರಬೇತಿ ಹಾಗೂ ತಾಂತ್ರಿಕ ವಿನಿಮಯ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ