* ಡೆಲ್ಲಿ ಫ್ರಾಂಚೈಸಿಯು 2026 ಆವೃತ್ತಿಯ (WPL) ಡಬ್ಲ್ಯುಪಿಎಲ್‌ನಲ್ಲಿ ತಮ್ಮ ತಂಡವನ್ನು ಜೇಮಿಮಾ ರಾಡ್ರಿಗಸ್ ಮುನ್ನಡೆಸಲಿದ್ದಾರೆ ಎಂದು 23-12-2025 ರಂದು ಘೋಷಿಸಿದೆ. 25 ವರ್ಷ ವಯಸ್ಸಿನ ಜೆಮಿಮಾ ತನ್ನ ನೇಮಕಾತಿಯನ್ನು ಗೌರವದ ಸಂಗತಿಯೆಂದು ಹೇಳಿದ್ದಾರೆ. “ನನ್ನ ಮೇಲೆ ವಿಶ್ವಾಸವಿಟ್ಟು, ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಿದ ಫ್ರಾಂಚೈಸಿಯ ಮಾಲೀಕರು ಮತ್ತು ಕೋಚ್ ಸಿಬ್ಬಂದಿಗೆ ನಾನು ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದು ಜೆಮಿಮಾ ಹೇಳಿದ್ದಾರೆ.
*ಜೇಮಿಮಾ ಕಳೆದ ನವೆಂಬರ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ ಶತಕ ಸಾಧಿಸಿ, ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
* ಡಬ್ಲ್ಯುಪಿಎಲ್(WPL) ಆರಂಭದಿಂದಲೇ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರನ್ನು ಈ ಬಾರಿ ನವೆಂಬರ್‌ನಲ್ಲಿ ನಡೆದ ಬಿಡ್ ಪ್ರಕ್ರಿಯೆಗೆ ಮೊದಲು ತಂಡದಿಂದ ಬಿಡುಗಡೆ ಮಾಡಲಾಗಿತ್ತು.
* ಈ ನಿರ್ಧಾರದಿಂದ ಡೆಲ್ಲಿ ತಂಡಕ್ಕೆ ಯುವ, ಸ್ಪಷ್ಟ ದೃಷ್ಟಿಯ ನಾಯಕಿ ಜೇಮಿಮಾ ಅವರಿಂದ ಹೊಸ ಹಾವಳಿ ಮತ್ತು ಶಕ್ತಿ ಸಿಗಲಿದೆ ಎಂಬ ನಿರೀಕ್ಷೆ ಮೂಡುತ್ತಿದೆ.
ಬುಧವಾರ, 24 ಡಿಸೆಂಬರ್ 2025
1:10 ಅಪರಾಹ್ನ
Daily PDF
ಜೆಮಿಮಾ ರಾಡ್ರಿಗಸ್ ಡೆಲ್ಲಿ ತಂಡದ ನಾಯಕಿಯಾಗಿ ನೇಮಕ
Authored by:
Akshata Halli