* ಕೇಂದ್ರ ಚುನಾವಣಾ ಆಯೋಗವು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ನಡೆಸಿದ್ದು, ಈ ವೇಳೆ 3.67 ಕೋಟಿ ಮತದಾರರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ.
* ಎರಡನೇ ಹಂತದ ಎಸ್‌ಐಆರ್ ಪ್ರಕ್ರಿಯೆ ಕೈಗೊಂಡ ಮಧ್ಯಪ್ರದೇಶ, ಛತ್ತೀಸಗಢ, ಕೇರಳ ಹಾಗೂ ಅಂಡಮಾನ್–ನಿಕೋಬಾರ್ ದ್ವೀಪಗಳ ಕರಡು ಮತದಾರರ ಪಟ್ಟಿಯನ್ನು 23-12-2015 ರಂದು ಪ್ರಕಟಿಸಲಾಗಿದೆ. ಇದಕ್ಕೂ ಮುನ್ನ ಪಶ್ಚಿಮ ಬಂಗಾಳ, ರಾಜಸ್ಥಾನ, ಗೋವಾ, ಪುದುಚೇರಿ, ಲಕ್ಷದ್ವೀಪ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳ ಕರಡು ಪಟ್ಟಿಗಳನ್ನು ಕಳೆದ ಹತ್ತು ದಿನಗಳಲ್ಲಿ ಆಯೋಗ ಬಿಡುಗಡೆ ಮಾಡಿತ್ತು.
* ಮತದಾರರ ಪ್ರಮಾಣ: ಎರಡನೇ ಹಂತದ ಪಟ್ಟಿಯಲ್ಲಿ 35.52 ಕೋಟಿ ಮತದಾರರಲ್ಲಿಂದ 31.85 ಕೋಟಿ ಮತದಾರರ ಹೆಸರು ಸ್ಥಾನ ಪಡೆದಿದೆ.
* ಕೈಬಿಟ್ಟ ಮತದಾರರು: ಕೈಬಿಟ್ಟ 3.67 ಕೋಟಿ ಮತದಾರರಲ್ಲಿ, 99.81 ಲಕ್ಷ ಮಂದಿ ಮೃತರು, 2.47 ಕೋಟಿ ಶಾಶ್ವತವಾಗಿ ವಲಸೆ ಹೋಗಿದ್ದಾರೆ, 18.60 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.
* ಅರ್ಜಿ ಮತ್ತು ಆಕ್ಷೇಪಣೆ: ಹೆಸರು ಪಟ್ಟಿಯಲ್ಲಿ ಇಲ್ಲದಿರುವವರು ಅರ್ಜಿ ಸಲ್ಲಿಸಿ ದಾಖಲೆಗಳನ್ನು ನೀಡಿ ಅಂತಿಮ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬಹುದು. ಆಕ್ಷೇಪಣೆ ಸಲ್ಲಿಕೆಗೆ ಜನವರಿ 22 2026 ಕೊನೆಯ ದಿನಾಂಕ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.