* 2024ರ ಆಕ್ಸ್‌ಫರ್ಡ್ ಎಕನಾಮಿಕ್ಸ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ನ 1,000 ಜಾಗತಿಕ ನಗರಗಳ ಶ್ರೇಯಾಂಕದಲ್ಲಿ ಭಾರತೀದ ರಾಜಧಾನಿ ದೆಹಲಿ 350 ನೇ ಸ್ಥಾನದಲ್ಲಿದೆ, ಬೆಂಗಳೂರಿಗೆ 411 ನೇ ಸ್ಥಾನ ಪಡೆದುಕೊಂಡಿದೆ. ಅಮೇರಿಕಾದ ನ್ಯೂಯಾರ್ಕ್ ನಗರ ಜಗತ್ತಿನ ಅತ್ಯಂತ ಉತ್ತಮ ನಗರವಾಗಿದೆ.
* ಈ ಜಾಗತಿಕ ನಗರ ಸೂಚ್ಯಂಕ ಪಟ್ಟಿಯಲ್ಲಿ ಮುಂಬೈ ಮಹಾನಗರ 427ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ನೆಲೆಗೊಂಡಿರುವ ಸುಲ್ತಾನ್‌ಪುರ ನಗರವು ಕೊನೆಯ (1,000ನೇ) ಸ್ಥಾನದಲ್ಲಿದೆ.
* ಎಕನಾಮಿಕ್ಸ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ಜಗತ್ತಿನ ನಗರಗಳ ಐದು ವಿಷಯಗಳ ಕುರಿತು ಎಲ್ಲ ಮಾಹಿತಿಯನ್ನು ಒದಗಿಸುತ್ತದೆ. ಆರ್ಥಿಕತೆ, ಮಾನವ ಸಂಪನ್ಮೂಲ, ಜೀವನ ಗುಣಮಟ್ಟ, ಪರಿಸರ ಮತ್ತು ಆಡಳಿತ ಈ ವಿಭಾಗಗಳಲ್ಲಿ ಕ್ರೋಢೀಕೃತ ಅಂಕಗಳನ್ನು ಪರಿಗಣಿಸಿ ಪ್ರತಿಯೊಂದು ನಗರದ ಒಟ್ಟಾರೆ ರ‍್ಯಾಂಕಿಂಗ್ ನ್ನು ನಿರ್ಧರಿಸಲಾಗುತ್ತದೆ.
* ದೆಹಲಿ ನಗರ ಮಾನವ ಸಂಪನ್ಮೂಲ ವಿಭಾಗದಲ್ಲಿ 55ನೇ ಸ್ಥಾನ ಹಾಗೂ ಆರ್ಥಿಕ ಕ್ಷೇತ್ರದಲ್ಲಿ 108ನೇ ಸ್ಥಾನ ಪಡೆದಿದೆ.
* ಜಾಗತಿಕ ನಗರ ಸೂಚ್ಯಂಕದ ಅಗ್ರ 10 ನಗರಗಳು:
- ನ್ಯೂಯಾರ್ಕ್ (ಯುನೈಟೆಡ್ ಸ್ಟೇಟ್ಸ್)
- ಲಂಡನ್ (ಯುನೈಟೆಡ್ ಕಿಂಗ್ಡಂ)
- ಸ್ಯಾನ್ ಜೋಸ್ (ಯುನೈಟೆಡ್ ಸ್ಟೇಟ್ಸ್)
- ಟೋಕಿಯೋ (ಜಪಾನ್)
- ಪ್ಯಾರಿಸ್ (ಫ್ರಾನ್ಸ್)
- ಸಿಯಾಟಲ್ (ಯುನೈಟೆಡ್ ಸ್ಟೇಟ್ಸ್)
- ಲಾಸ್ ಏಂಜಲೀಸ್ (ಯುನೈಟೆಡ್ ಸ್ಟೇಟ್ಸ್)
- ಸ್ಯಾನ್ ಫ್ರಾನ್ಸಿಸ್ಕೋ (ಯುನೈಟೆಡ್ ಸ್ಟೇಟ್ಸ್)
- ಮೆಲ್ಬೋರ್ನ್ (ಆಸ್ಟ್ರೇಲಿಯಾ)
- ಜ್ಯೂರಿಚ್ (ಸ್ವಿಟ್ಜರ್ಲೆಂಡ್)
* ಜಾಗತಿಕ ನಗರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ನಗರಗಳು :
- 350: ನವದೆಹಲಿ
- 411: ಬೆಂಗಳೂರು
- 427: ಮುಂಬೈ
- 472: ಚೆನ್ನೈ
- 521: ಕೊಚ್ಚಿ
- 528: ಕೋಲ್ಕತ್ತಾ
- 534: ಪುಣೆ
- 550: ತ್ರಿಶೂರ್
- 564: ಹೈದರಾಬಾದ್
- 580: ಕೋಝಿಕ್ಕೋಡ್