* ವಿಶ್ವಸಂಸ್ಥೆ ಮೇ 28– ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳಾ ಶಾಂತಿಪಾಲಕಿ ಮೇಜರ್ ರಾಧಿಕಾ ಸೇನ್ ಅವರಿಗೆ ಪ್ರತಿಷ್ಠಿತ ವರ್ಷದ ಮಿಲಿಟರಿ ಸಾಧಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಘೋಷಿಸಿದ್ದಾರೆ.
* ಮೇ 30 ರಂದು ವಿಶ್ವಸಂಸ್ಥೆಯ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನದಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಯುನೈಟೆಡ್ ನೇಷನ್ ಆರ್ಗನೈಸೇಶನ್ ಸ್ಟೆಬಿಲೈಸೇಶನ್ ಮಿಷನ್‌ನೊಂದಿಗೆ ಸೇವೆ ಸಲ್ಲಿಸಿದ ಮೇಜರ್ ರಾಧಿಕಾ ಸೇನ್ ಅವರಿಗೆ ಗುಟೆರೆಸ್ ಅವರು ಪ್ರತಿಷ್ಠಿತ 2023 ವಿಶ್ವಸಂಸ್ಥೆಯ ಮಿಲಿಟರಿ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
* ರಾಧಿಕಾ ಅವರು ಮಾರ್ಚ್ 2023 ರಿಂದ ಏಪ್ರಿಲ್ 2024 ರವರೆಗೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವದಲ್ಲಿ ವಿಶ್ವಸಂಸ್ಥೆ ಎಂಗೇಜ್‌ಮೆಂಟ್ ಪ್ಲಟೂನ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
* 2019 ರ ವಿಶ್ವಸಂಸ್ಥೆಯ ಮಿಲಿಟರಿ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಮೇಜರ್ ಸುಮನ್ ಗವಾನಿ ಅವರ ನಂತರ ಈ ಪ್ರತಿಷ್ಠಿತ ಪ್ರಶಸ್ತಿ ಗಳಿಸಿದ ಎರಡನೇ ಭಾರತೀಯ ಶಾಂತಿಪಾಲಕ ಮೇಜರ್ ಎನಿಸಿದ್ದಾರೆ.
ಬುಧವಾರ, 29 ಮೇ 2024
10:56 ಪೂರ್ವಾಹ್ನ
Daily PDF
ರಾಧಿಕಾ ಸೆನ್ ಗೆ ವಿಶ್ವಸಂಸ್ಥೆಯ ಮಿಲಿಟರಿ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿ
Authored by:
Bhagya R K