* ಇತ್ತೀಚೆಗೆ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ (ಐಎನ್‌ಎಸ್‌ಎ) ತನ್ನ ವಾರ್ಷಿಕ ಫೆಲೋಗಳ ಪಟ್ಟಿಯಲ್ಲಿ ಬದಲಾವಣೆ ತಂದಿದ್ದು ಈ ವರ್ಷದ ಪಟ್ಟಿಯಲ್ಲಿ ವೃತ್ತಿಪರ ವಿಜ್ಞಾನಿಗಳಲ್ಲದವರಿಗೂ ಸ್ಥಾನವನ್ನು ನೀಡಿದೆ.
*  INSA ಫೆಲೋ ಗೌರವ ಪಟ್ಟಿಯಲ್ಲಿ ಸುಧಾಮೂರ್ತಿ, ಎನ್. ಆರ್.ನಾರಾಯಣಮೂರ್ತಿ, ನಂದನ್ ನಿಲೇಕಣಿ ಮತ್ತು ರಾಜೇಂದ್ರ ಸಿಂಗ್ ಅವರಂತಹ ಹಲವಾರು ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಒಟ್ಟು 61 ಸಾಧಕರಿಗೆ ಫೆಲೋಷಿಪ್ ನೀಡಲು ನಿರ್ಧರಿಸಲಾಗಿದೆ.
* ಧನಸಹಾಯ ಮತ್ತು ಸಾಮಾಜಿಕ ಉಪಕ್ರಮಗಳ ಮೂಲಕ ವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಗಳು, ವೈಜ್ಞಾನಿಕ ಪ್ರಗತಿಯಲ್ಲಿ ಅವರ ಬಹುವಿಧ ಒಳಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ನೂತನ ಫೆಲೋ ಪಟ್ಟಿಯು ಉಲ್ಲೇಖಿಸಿದೆ. 
* ಐಎನ್‌ಎಎ ಫೆಲೋಗಳನ್ನು ವೈಜ್ಞಾನಿಕ ಕೊಡುಗೆಗಳ ಆಧಾರದ ಮೇಲೆ ನಾಮನಿರ್ದೇಶನ ಮಾಡಲಾಗಿದೆ. ನಿಯಮ ದಲ್ಲಿನ ಈ ಬದಲಾವಣೆಯು ವಿಜ್ಞಾನವನ್ನು ಮುನ್ನಡೆಸುವಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಶೈಕ್ಷಣಿಕೇತರ ಕೊಡುಗೆದಾರರು ವಹಿಸಿದ ಪಾತ್ರಗಳನ್ನು ಸ್ಮರಿಸಲು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
* ಭಾರತದಲ್ಲಿ ವಿಜ್ಞಾನವನ್ನು ಉತ್ತೇಜಿಸಲು ಮತ್ತು ಮಾನವೀಯತೆ ಮತ್ತು ರಾಷ್ಟ್ರೀಯ ಕಲ್ಯಾಣಕ್ಕಾಗಿ ಜನವರಿ 1935 ರಲ್ಲಿ INSA ಸ್ಥಾಪಿಸಲಾಯಿತು. ಇದನ್ನು ಆರಂಭದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್ ಆಫ್ ಇಂಡಿಯಾ (NISI) ಎಂದು ಕರೆಯಲಾಗುತ್ತಿತ್ತು. ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ ​​(ISCA) INSA ವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. INSA ತನ್ನ ಪ್ರಧಾನ ಕಛೇರಿಯನ್ನು ದೆಹಲಿಯಲ್ಲಿ ಹೊಂದಿದೆ.