* ಈ ವರ್ಷದಲ್ಲಿ ಹವಾಮಾನ ಈ ಬದಲಾವಣೆ, ಆರ್ಥಿಕ ಅಸ್ಥಿರತೆ ಮತ್ತು ಸಂಘರ್ಷಗಳು ಮಕ್ಕಳ ಜೀವನ ಮತ್ತು ಭವಿಷ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿವೆ ಎಂದು ಯುನಿಸೆಫ್ (ವಿಶ್ವಸಂಸ್ಥೆಯ ಮಕ್ಕಳ ನಿಧಿ) ವರದಿ ಮಾಡಿದೆ.
* ಯುನಿಸೆಫ್ ತನ್ನ ವರದಿಯಲ್ಲಿ ಜಾಗತಿಕವಾಗಿ ಮಕ್ಕಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಉಲ್ಲೇಖಿಸಿ, ಮಕ್ಕಳ ರಕ್ಷಣೆಗೆ ಮತ್ತು ಬೆಂಬಲಕ್ಕೆ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳನ್ನು ಒತ್ತಿ ಹೇಳಿದೆ.
* 473 ಮಿಲಿಯನ್ ಮಕ್ಕಳು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಇದು ಜಾಗತಿಕ ಮಕ್ಕಳ ಜನಸಂಖ್ಯೆಯ ಶೇ.19 ಅನ್ನು ತಲುಪಿದೆ.
* ಸಶಸ್ತ್ರ ಸಂಘರ್ಷಗಳು ಮಕ್ಕಳ ಜೀವನದ ಮೇಲೆ ಪರಿಣಾಮವನ್ನುಂಟುಮಾಡುತ್ತವೆ. ಯುದ್ಧದಂತಹ ಘಟನೆಗಳು, ವಾಸಿಸುವ ಪ್ರದೇಶಗಳ ಸ್ಥಳಾಂತರ, ಹಸಿವು ಮತ್ತು ಮಾನಸಿಕ ಆಘಾತಕ್ಕೆ ಕಾರಣವಾಗುತ್ತವೆ ಎಂದು ಯುನಿಸೆಫ್ ಕಳವಳ ವ್ಯಕ್ತಪಡಿಸಿದೆ.
* ಸುಮಾರು 400 ಮಿಲಿಯನ್ ಮಕ್ಕಳು ಸಾಲದ ಹೊರೆ ಹೊಂದಿರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹೆಚ್ಚಿದ ಸಾಲದಿಂದ ಸರಕಾರಗಳು ಅಗತ್ಯ ಸೇವೆಗಳಿಗೆ ಹಣಕಾಸು ಒದಗಿಸಲು ತೊಂದರೆ ಅನುಭವಿಸುತ್ತಿವೆ.
* ಕೆಲವು ಆಫ್ರಿಕನ್ ರಾಷ್ಟ್ರಗಳಲ್ಲಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ರಕ್ಷಣೆಗಿಂತಲೂ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರಿಂದ ಮಕ್ಕಳ ಆರೋಗ್ಯಕರ ಬೆಳವಣಿಗೆಯ ಮೇಲೆ ಹಾನಿಕಾರಕ ಪರಿಣಾಮ ಉಂಟಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮಕ್ಕಳ ಭವಿಷ್ಯದ ಮೇಲೆ ಹವಾಮಾನ ಬದಲಾವಣೆ, ಆರ್ಥಿಕ ಅಸ್ಥಿರತೆ ಮತ್ತು ಸಂಘರ್ಷಗಳ ಪರಿಣಾಮ: ಯುನಿಸೆಫ್ ವರದಿ
Published by Jyoti Angadi
21 ಜನವರಿ 2025