* ಭಾರತೀಯ ರೇಡಿಯೊ ಸೇವೆಗಳಲ್ಲಿ 'ಆಲ್ ಇಂಡಿಯಾ ರೇಡಿಯೊ' (ಎಐಆರ್) ಬದಲು “ಆಕಾಶವಾಣಿ' ಎಂದು ಉಲ್ಲೇಖಿಸಲು ನಿರ್ಧರಿಸಲಾಗಿದ್ದು, ಎಐಆರ್ ಅನ್ನು ಆಕಾಶವಾಣಿ ಎಂದು ಬದಲಿಸಿರುವ ಶಾಸನಬದ್ಧ ನಿಬಂಧನೆ
ಜಾರಿಯಾಗಬೇಕು ಎಂದು ಆಕಾಶವಾಣಿ ಮಹಾನಿರ್ದೇಶಕಿಯಾದ ವಸುಧಾ ಗುಪ್ತಾ ರವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
* ಎಐಆರ್‌ಗೆ 'ಆಕಾಶವಾಣಿ' ಎಂದು ಖ್ಯಾತ ಕವಿಗಳಾದ ರವೀಂದ್ರನಾಥ ಠಾಗೋರರು ರವರು 1939ರಲ್ಲಿ ಕಲ್ಕತ್ತಾ ಶಾರ್ಟ್‌ವೇವ್ ರೇಡಿಯೋ ಕೇಂದ್ರದ ಉದ್ಘಾಟನೆ ವೇಳೆ ಸಂಬೋಧಿಸಿದ್ದು, ಇದಕ್ಕೂ ಮುನ್ನ 1935 ರಲ್ಲಿ
ಸೆಪ್ಟೆಂಬರ್ 10ರಂದು 'ಆಕಾಶವಾಣಿ ಮೈಸೂರು' ಎಂಬ ಖಾಸಗಿ ರೇಡಿಯೋ ಕೇಂದ್ರ ಆರಂಭವಾಗಿತ್ತು.
ಇನ್ನು ಮುಂದೆ ಎಐಆರ್ ಬದಲು 'ಆಕಾಶವಾಣಿ'
Published by Yallamma G
05 ಮೇ 2023