➤ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐತಿಹಾಸಿಕ ಉಚಿತ ವ್ಯಾಪಾರ ಒಪ್ಪಂದ (Free Trade Agreement - FTA) ಅಕ್ಟೋಬರ್ 20, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ನ್ಯೂಜಿಲೆಂಡ್‌ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಟಾಡ್ ಮೆಕ್ಲೇ (Todd McClay) ಅವರ ನಡುವೆ ನಡೆದ ವರ್ಚುವಲ್ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.
➤ ಈ ಒಪ್ಪಂದಕ್ಕೆ ಏಪ್ರಿಲ್ 27, 2026 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಸಹಿ ಹಾಕಲಾಗಿತ್ತು. ನ್ಯೂಜಿಲೆಂಡ್ ಸಂಸತ್ತು ಸೆಪ್ಟೆಂಬರ್ 16, 2026 ರಂದು ಇದಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಅನುಮೋದಿಸಿದ್ದು, ಈಗ ಉಭಯ ದೇಶಗಳ ಆಂತರಿಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
➤ ಒಪ್ಪಂದದ ಮುಖ್ಯ ಪ್ರಮುಖಾಂಶಗಳು:
1. ಶೂನ್ಯ ಸುಂಕದ ರಫ್ತು (Zero-Duty Access): ಈ ಒಪ್ಪಂದ ಜಾರಿಯಾದ ಮೊದಲ ದಿನದಿಂದಲೇ ನ್ಯೂಜಿಲೆಂಡ್‌ಗೆ ರಫ್ತಾಗುವ ಭಾರತದ 100% ಉತ್ಪನ್ನಗಳಿಗೆ ಶೂನ್ಯ ಸುಂಕ (Duty-Free) ಪ್ರವೇಶ ದೊರೆಯಲಿದೆ. ಜವಳಿ (Textiles), ಚರ್ಮದ ಉತ್ಪನ್ನಗಳು, ಪಾದರಕ್ಷೆಗಳು, ಎಂಜಿನಿಯರಿಂಗ್ ಸರಕುಗಳು, ರತ್ನ ಮತ್ತು ಆಭರಣಗಳು ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೇಲಿನ ಗರಿಷ್ಠ ಶೇ.10ರಷ್ಟು ಸುಂಕ ರದ್ದಾಗಲಿದೆ.
2. ವ್ಯಾಪಾರ ಗುರಿ (Trade Target 2030): 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು (ಸರಕು ಮತ್ತು ಸೇವೆಗಳು) 7 ಬಿಲಿಯನ್ ನ್ಯೂಜಿಲೆಂಡ್ ಡಾಲರ್ (ಸುಮಾರು ₹35,000 ಕೋಟಿ) ಗೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ.
3. ಹೂಡಿಕೆ ಉತ್ತೇಜನ (Investment): ನ್ಯೂಜಿಲೆಂಡ್ ಭಾರತದಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿದೆ. ಈ ಹೂಡಿಕೆಯು ಭಾರತದ ಮೂಲಸೌಕರ್ಯ, ಕೃಷಿ, ಉತ್ಪಾದನಾ ವಲಯ ಮತ್ತು ನವೋದ್ಯಮಗಳಿಗೆ (Startups) ಹೆಚ್ಚಿನ ನೆರವಾಗಲಿದೆ.
4. ಭಾರತೀಯ ರೈತರ ಹಿತರಕ್ಷಣೆ (Protections for Farmers): ಭಾರತದ ಕೃಷಿ ವಲಯವನ್ನು ರಕ್ಷಿಸಲು ಹಾಲಿನ ಉತ್ಪನ್ನಗಳು (Dairy Products), ಜಾನುವಾರು ಮಾಂಸ, ಸಕ್ಕರೆ ಮತ್ತು ಖಾದ್ಯ ತೈಲಗಳನ್ನು ಸುಂಕ ವಿನಾಯಿತಿಯಿಂದ ಹೊರಗಿಡಲಾಗಿದೆ. ನ್ಯೂಜಿಲೆಂಡ್‌ನ ಆಪಲ್, ಕಿವಿ ಹಣ್ಣು ಮತ್ತು ಮನುಕಾ ಜೇನುತುಪ್ಪಕ್ಕೆ 'Tariff Rate Quotas' (TRQ) ಮತ್ತು ಕನಿಷ್ಠ ಆಮದು ಬೆಲೆ (MIP) ನಿಯಮಗಳನ್ನು ಅನ್ವಯಿಸಲಾಗಿದೆ.
5. ಸೇವೆಗಳು ಮತ್ತು ವೀಸಾ ಸೌಲಭ್ಯ (Services & Mobility): ಐಟಿ (IT), ನಿರ್ಮಾಣ ಮತ್ತು ಪ್ರವಾಸೋದ್ಯಮ ಸೇರಿದಂತೆ 118 ಸೇವಾ ವಲಯಗಳಿಗೆ ಸುಲಭ ಪ್ರವೇಶ ಸಿಗಲಿದೆ. ಕುಶಲ ಭಾರತೀಯ ಉದ್ಯೋಗಿಗಳಿಗೆ ವರ್ಷಕ್ಕೆ 5,000 ತಾತ್ಕಾಲಿಕ ಉದ್ಯೋಗ ವೀಸಾಗಳು ಮತ್ತು ಯುವಕರಿಗೆ 1,000 ವರ್ಕಿಂಗ್ ಹಾಲಿಡೇ ವೀಸಾ ಲಭ್ಯವಾಗಲಿದೆ. STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಪದವೀಧರರಿಗೆ 3 ವರ್ಷ ಹಾಗೂ ಡಾಕ್ಟರೇಟ್ (PhD) ಸಂಶೋಧಕರಿಗೆ 4 ವರ್ಷಗಳ ಶಿಕ್ಷಣೋತ್ತರ ಉದ್ಯೋಗ ಹಕ್ಕು (Post-study work rights) ದೊರೆಯಲಿದೆ.
6. ಔಷಧ ವಲಯಕ್ಕೆ ಉತ್ತೇಜನ (Pharma Sector): US FDA, EMA, UK MHRA ನಂತಹ ಜಾಗತಿಕ ಸಂಸ್ಥೆಗಳಿಂದ ಅನುಮೋದನೆ ಪಡೆದ ಭಾರತೀಯ ಫಾರ್ಮಾ ಉತ್ಪನ್ನಗಳನ್ನು ನ್ಯೂಜಿಲೆಂಡ್ ನೇರವಾಗಿ ಒಪ್ಪಿಕೊಳ್ಳಲಿದೆ.
ಭಾರತ - ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ (FTA) ಅಕ್ಟೋಬರ್ 20ರಿಂದ ಜಾರಿಗೆ
Published by Yallamma G
23 ಸೆಪ್ಟೆಂಬರ್ 2026