- ನೀಡಿದ ಉಡುಗೊರೆ: 4 ಸಾಮಾನ್ಯ ನೀಲಿ ನವಿಲುಗಳು (Blue Peafowl) ಮತ್ತು 1 ಅಪರೂಪದ ಬಿಳಿ ಗಂಡು ನವಿಲು (White Peacock).
- ಸಮಾರಂಭದ ವಿವರ: ಜಿನೀವಾದ ವಿಶ್ವಸಂಸ್ಥೆ ಕಚೇರಿಯ ಭಾರತದ ಕಾಯಂ ಪ್ರತಿನಿಧಿ ಅರಿಂದಮ್ ಬಾಗ್ಚಿ (Arindam Bagchi) ಅವರು ವಿಶ್ವಸಂಸ್ಥೆ ಜಿನೀವಾ ಕಚೇರಿಯ ಡೈರೆಕ್ಟರ್ ಜನರಲ್ ತಾತ್ಯಾನಾ ವಲೋವಾಯಾ (Tatiana Valovaya) ಅವರಿಗೆ ಈ ನವಿಲುಗಳನ್ನು ಹಸ್ತಾಂತರಿಸಿದರು.
- ಬಣ್ಣದ ಸಂಕೇತ: ನೀಲಿ ಮತ್ತು ಬಿಳಿ ಬಣ್ಣಗಳು ವಿಶ್ವಸಂಸ್ಥೆಯ (UN) ಧ್ವಜ ಹಾಗೂ ಲಾಂಛನದ ಬಣ್ಣಗಳನ್ನು ಪ್ರತಿನಿಧಿಸುತ್ತವೆ.
- ವಸತಿ ಸ್ಥಾನ: ಈ ನವಿಲುಗಳನ್ನು ಜಿನೀವಾದ ಅರಿಯಾನಾ ಪಾರ್ಕ್ (Ariana Park) ನಲ್ಲಿರುವ ಹೆಕ್ಟೇರ್ ಪ್ರದೇಶದಲ್ಲಿ ಮುಕ್ತವಾಗಿ ಹಾರಾಡಲು ಬಿಡಲಾಗುತ್ತದೆ.
➤ ಅರಿಯಾನಾ ಪಾರ್ಕ್ ಮತ್ತು ನವಿಲುಗಳ ಇತಿಹಾಸ:
- ಜಿನೀವಾದ ವಿಶ್ವಸಂಸ್ಥೆಯ 'ಪ್ಯಾಲೇಸ್ ಡೆಸ್ ನೇಷನ್ಸ್' ಕಚೇರಿ ಇರುವ 46 ಹೆಕ್ಟೇರ್ ವಿಸ್ತೀರ್ಣದ ಅರಿಯಾನಾ ಪಾರ್ಕ್ ನವಿಲುಗಳಿಗೆ ಹೆಸರುವಾಸಿಯಾಗಿದೆ.
- 1890 ರಲ್ಲಿ ಸ್ವಿಸ್ ಪುರಾತತ್ವಶಾಸ್ತ್ರಜ್ಞ ಗುಸ್ಟಾವ್ ರೆವಿಲಿಯೋಡ್ (Gustave Revilliod) ಅವರು ಈ ರಮಣೀಯ ಭೂಮಿಯನ್ನು ಜಿನೀವಾ ನಗರಕ್ಕೆ ವಹಿಸಿಕೊಡುವಾಗ, 'ಇಲ್ಲಿ ನವಿಲುಗಳು ಸದಾ ಸಂಚರಿಸುತ್ತಿರಬೇಕು' ಎಂಬ ಷರತ್ತು ವಿಧಿಸಿದ್ದರು.
- 1997 ರಲ್ಲಿ ಜಪಾನ್‌ನ ಮೃಗಾಲಯವೊಂದು ಜಿನೀವಾ UN ಕಚೇರಿಗೆ ನವಿಲುಗಳನ್ನು ಕೊಡುಗೆಯಾಗಿ ನೀಡಿತ್ತು.
➤ ನವಿಲುಗಳ ಆರೈಕೆ ಮತ್ತು ಜೈವಿಕ ವೈವಿಧ್ಯತೆ:
- ಆರೈಕೆ: 'ಜಿನೀವಾ ಬಯೋಪಾರ್ಕ್' (Geneva Bioparc) ಸಂಸ್ಥೆಯು ತಜ್ಞ ಪಶುವೈದ್ಯರೊಂದಿಗೆ ಈ ನವಿಲುಗಳ ಆರೋಗ್ಯ ಮತ್ತು ಆರೈಕೆಯ ಮೇಲ್ವಿಚಾರಣೆ ವಹಿಸಲಿದೆ.
- ಆರಂಭಿಕ ಹಂತ: ಮೊದಲ 3 ತಿಂಗಳು ಇವುಗಳನ್ನು ಆವರಣದಲ್ಲಿದ್ದು (Enclosed Habitat) ವಾತಾವರಣಕ್ಕೆ ಒಗ್ಗಿಕೊಳ್ಳಲು ಬಿಡಲಾಗುತ್ತದೆ. ತದನಂತರ ಅರಿಯಾನಾ ಪಾರ್ಕ್‌ನಲ್ಲಿ ಸ್ವತಂತ್ರವಾಗಿ ಸಂಚರಿಸಲು ಬಿಡಲಾಗುತ್ತದೆ.
- ಹೆಸರಿಡುವ ಸ್ಪರ್ಧೆ: ವಿಶ್ವಸಂಸ್ಥೆಯು ಈ 5 ನವಿಲುಗಳಿಗೆ ಸಾರ್ವಜನಿಕರಿಂದ ಸೂಕ್ತ ಹೆಸರುಗಳನ್ನು ಆಯ್ಕೆ ಮಾಡಲು ಸ್ಪರ್ಧೆಯನ್ನು ಆಯೋಜಿಸಲು ನಿರ್ಧರಿಸಿದೆ.