➤ ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ‘ಆತ್ಮನಿರ್ಭರ ಭಾರತ್’ (Atmanirbhar Bharat) ಪರಿಕಲ್ಪನೆಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೃಹತ್ ನಿರ್ಧಾರ ಕೈಗೊಂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (DAC - Defence Acquisition Council) ಸಭೆಯಲ್ಲಿ ₹1.10 ಲಕ್ಷ ಕೋಟಿ ಮೌಲ್ಯದ ವಿವಿಧ ರಕ್ಷಣಾ ಖರೀದಿ ಪ್ರಸ್ತಾಪಗಳಿಗೆ 'ಅಗತ್ಯತೆಯ ಸ್ವೀಕಾರ' (AoN - Acceptance of Necessity) ನೀಡಲಾಗಿದೆ. ವಿಶೇಷವೆಂದರೆ, ಅನುಮೋದಿಸಲಾದ ಒಟ್ಟು ಮೊತ್ತದ ಪೈಕಿ ಶೇಕಡಾ 98% ರಷ್ಟು ಖರೀದಿಯನ್ನು ದೇಶೀಯ ರಕ್ಷಣಾ ಉದ್ಯಮದಿಂದಲೇ (Make in India) ಮಾಡಲು ನಿರ್ಧರಿಸಲಾಗಿದೆ.
➤ ತ್ರಿಪಡೆಗಳಿಗೆ ಸಿಗಲಿರುವ ಪ್ರಮುಖ ಉಪಕರಣಗಳು ಮತ್ತು ತಂತ್ರಜ್ಞಾನಗಳು:
1. ಭಾರತೀಯ ಭೂಸೇನೆ (Indian Army):
- CBRN ಸ್ಪೆಷಲ್ ವಾಹನಗಳು: ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು (Chemical, Biological, Radiological and Nuclear - CBRN) ದಾಳಿಗಳನ್ನು ಪತ್ತೆ ಹಚ್ಚುವ, ಗುರ್ತಿಸುವ ಮತ್ತು ಮೇಲ್ವಿಚಾರಣೆ ಮಾಡುವ ವಿಶೇಷ ವಾಹನಗಳು.
- ಹೈ ಮೊಬಿಲಿಟಿ ವೆಹಿಕಲ್ಸ್ (HMVs): ಕಠಿಣ ಭೂಪ್ರದೇಶಗಳಲ್ಲಿ ಸೇನಾ ಪಡೆಗಳ ಸಾಗಾಟ ಮತ್ತು ಲಾಜಿಸ್ಟಿಕ್ಸ್ ಬಲಪಡಿಸಲು.
- ಸೆಲ್ಫ್-ಪ್ರೊಪೆಲ್ಡ್ ಮೆಕ್ಯಾನಿಕಲ್ ಮೈನ್ ಲೇಯರ್ಸ್ (MMLs): ಯುದ್ಧಭೂಮಿಯಲ್ಲಿ ವೇಗವಾಗಿ ಗಣಿ/ಬಾಂಬ್ ಹರಡುವ ಸಾಮರ್ಥ್ಯ.
- ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH): ದುರ್ಗಮ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಬೆಂಬಲ.
- ಸರ್ವತ್ರ ಬ್ರಿಡ್ಜ್ ಸಿಸ್ಟಮ್ (Sarvatra Bridge System): ನದಿ ಮತ್ತು ತಗ್ಗು ಪ್ರದೇಶಗಳನ್ನು ದಾಟಲು ಸೇನೆಗೆ ತಕ್ಷಣದ ಸೇತುವೆ ನಿರ್ಮಾಣ ವ್ಯವಸ್ಥೆ.
2. ಭಾರತೀಯ ನೌಕಾಪಡೆ (Indian Navy):
- ಅರುಧ್ರ ರೇಡಾರ್‌ಗಳು (Arudhra Radars): ನೌಕಾಪಡೆಯ ಏರ್ ಸ್ಟೇಷನ್‌ಗಳಲ್ಲಿ ಪ್ರಸ್ತುತ ಇರುವ ಏರ್ ರೂಟ್ ಸರ್ವೆಲೆನ್ಸ್ ರೇಡಾರ್‌ಗಳ ಬದಲಿಗೆ ಹೊಸ ತಂತ್ರಜ್ಞಾನದ ರೇಡಾರ್ ಅಳವಡಿಕೆ.
- ಮೆರೈನ್ ಗ್ಯಾಸ್ ಟರ್ಬೈನ್‌ಗಳು (Marine Gas Turbines - MGT): ಯುದ್ಧನೌಕೆಗಳ ಚಾಲನೆಗೆ ಅಗತ್ಯವಿರುವ MGTಗಳ ದೇಶೀಯ ವಿನ್ಯಾಸ ಮತ್ತು ಅಭಿವೃದ್ಧಿ. ಇದರಿಂದ ವಿದೇಶಿ ಕಂಪನಿಗಳ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ.
3. ಭಾರತೀಯ ವಾಯುಪಡೆ (Indian Air Force):
- ಗ್ರೌಂಡ್-ಬೇಸ್ಡ್ ಮಲ್ಟಿ-ಪರ್ಪಸ್ ಜಾಮರ್‌ಗಳು (GBMPJ): ಶತ್ರು ಪಡೆಗಳ ರೇಡಾರ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜ್ಯಾಮ್ ಮಾಡುವ ವ್ಯವಸ್ಥೆ.
- DEFSAC ವ್ಯವಸ್ಥೆ: ಸಾಂಪ್ರದಾಯಿಕ ಕಾಗದದ ಗುರುತಿನ ಚೀಟಿಗಳ ಬದಲಿಗೆ ಡಿಫೆನ್ಸ್ ಫೋರ್ಸಸ್ ಸೆಕ್ಯೂರ್ ಆಕ್ಸೆಸ್ ಕಾರ್ಡ್ (DEFSAC) ಎಂಬ ಸ್ಮಾರ್ಟ್ RFID ಆಧಾರಿತ ಗುರುತಿನ ಚೀಟಿಗಳ ಅಳವಡಿಕೆ.
ಮಂಗಳವಾರ, 08 ಸೆಪ್ಟೆಂಬರ್ 2026
3:00 ಅಪರಾಹ್ನ
Daily PDF
ಭಾರತೀಯ ರಕ್ಷಣಾ ವಲಯಕ್ಕೆ ಬೃಹತ್ ಬಲ: ₹1.10 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಖರೀದಿ ಪ್ರಸ್ತಾಪಗಳಿಗೆ DAC ಅಪ್ರೂವಲ್!
Authored by:
Akshata Halli