➤ 2026ರ ಸೆಪ್ಟೆಂಬರ್ 7ರಂದು ಗೋವಾದ ತಾಳೆಗಾಂವ್‌ನಲ್ಲಿರುವ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವೈಭವೋಪೇತ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಗೋವಾ ರಾಜ್ಯ ಪೊಲೀಸ್ ಪಡೆಗೆ ಅತ್ಯುನ್ನತ ‘ಪ್ರೆಸಿಡೆಂಟ್ಸ್ ಕಲರ್’ (President's Colour / ರಾಷ್ಟ್ರಪತಿಯವರ ವರ್ಣ ಧ್ವಜ) ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಗೌರವವನ್ನು ಪಡೆದ ಭಾರತದ 5ನೇ ರಾಜ್ಯ ಪೊಲೀಸ್ ಪಡೆ ಎಂಬ ಹೆಗ್ಗಳಿಕೆಗೆ ಗೋವಾ ಪೊಲೀಸ್ ಪಾತ್ರವಾಗಿದೆ.➤ ‘ಪ್ರೆಸಿಡೆಂಟ್ಸ್ ಕಲರ್’ : ಸೇನೆ, ನೌಕಾಪಡೆ, ವಾಯುಪಡೆ ಹಾಗೂ ರಾಜ್ಯ ಪೊಲೀಸ್ ಪಡೆಗಳು ರಾಷ್ಟ್ರಕ್ಕೆ ಸಲ್ಲಿಸಿದ 8 ದಶಕಗಳಿಗೂ ಹೆಚ್ಚಿನ ಅಪ್ರತಿಮ ಸೇವೆ, ಶಿಸ್ತು, ಶೌರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ನೀಡಲಾಗುವ ಅತ್ಯುನ್ನತ ಮಿಲಿಟರಿ/ಪೊಲೀಸ್ ಗೌರವ ಇದಾಗಿದೆ.- ಪ್ರದಾನ ಮಾಡುವವರು: ಇದನ್ನು ಭಾರತದ ರಾಷ್ಟ್ರಪತಿಗಳ ಪರವಾಗಿ ಅಥವಾ ನೇರವಾಗಿ ಪ್ರದಾನ ಮಾಡಲಾಗುತ್ತದೆ.➤ ಸೈಬರ್ ಹೆಲ್ಪ್‌ಲೈನ್ (1930) ಮತ್ತು AI ತಂತ್ರಜ್ಞಾನ: ಈ ಸಮಾರಂಭದಲ್ಲಿ ಗೃಹ ಸಚಿವರು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಗಾಗಿ AI ಆಧಾರಿತ ಬಹುಭಾಷಾ ಧ್ವನಿ ಸಹಾಯಕ (Multilingual Voice Assistant) ಸೇವೆಯನ್ನು ಲೋಕಾರ್ಪಣೆಗೊಳಿಸಿದರು. ಇದು ಸಂವಿಧಾನದ 8ನೇ ಅನುಸೂಚಿಯಲ್ಲಿರುವ (8th Schedule) ಎಲ್ಲಾ 22 ಭಾಷೆಗಳಲ್ಲಿ ದೂರುಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ.